ಲಾಕ್ ಡೌನ್ ಇರುವುದರಿಂದ ಕ್ರೀಡಾ ಪಟುಗಳು ಲಾಕ್ ಡೌನ್ ಸಮಯದಲ್ಲಿ ತಮ್ಮ ಫಿಟ್ ನೆಸ್ ಕಾಯ್ದುಕೊಳ್ಳಲು ಮನೆಯಲ್ಲಿಯೇ ವಿವಿಧ ವ್ಯಾಯಾಮಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವ್ಯಾಯಾಮ ಮಾಡುತ್ತಾ, ವಿರಾಟ್ ಕೊಹ್ಲಿ ಅವರಿಗೆ ಫಿಟ್ ನೆಸ್ ಚಾಲೆಂಜ್ ಫಾಸ್ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಪ್ಲೈ ಪುಶ್ ಆಫ್ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ “ಸ್ಟ್ರೊಂಗರ್ ಫಿಟ್ಟರ್” ಚಾಲೆಂಜನ್ನು ಫಾಸ್ ಮಾಡಿದ್ದಾರೆ. ಕ್ರೀಕೆಟ್ ನಿಂದ ದೂರಉಳಿದಿರುವ ಆಟಗಾರರು ಫಿಟ್ ಆಗಿರಲು ಮನೆಯಲ್ಲಿಯೇ ವರ್ಕೌಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಫಿಟ್ ನೆಸ್ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ಫಾಸ್ ಮಾಡುವುದು ಒಂದು ಟ್ರೆಂಡ್ ಆಗಿ ಮಾರ್ಪಾಡಾಗಿದೆ. ಅಂತೆಯೇ ಹಾರ್ದಿಕ್ ಪಾಂಡ್ಯ ಸಹ ತಮ್ಮ ಪ್ಲೈ ಪುಶ್ ಆಫ್ ಮಾಡಿರುವ ವಿಡಿಯೋವನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಚಾಲೆಂಗ್ ಸ್ವೀಕರಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಪ್ಲೈ ಪುಶ್ ಆಫ್ ತುಂಬಾ ಇಷ್ಟವಾಯಿತು. ಇದಕ್ಕೆ ನಾನು ಚಪ್ಪಾಳೆ ಸೇರಿಸಿದ್ದೇನೆ ಎಂದು ತಮ್ಮ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ವಿಡಿಯೋದಲ್ಲಿ ತುಂಬಾ ಸುಲಭವಾಗಿ ಪ್ಲೈ ಪುಶ್ ಆಫ್ ಜೊತೆಗೆ ಚಪ್ಪಾಳೆ ಸೇರಿಸಿ ಮಾಡಿರುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.
View this post on Instagram
Hey H @hardikpandya93 loved your fly push ups 💪😎. Here’s adding a little clap to it 😉.
ಲಾಕ್ ಡೌನ್ ಸಮಯದಲ್ಲಿ ಟೀಮ್ ಇಂಡಿಯಾದ ಆಟಗಾರರು ತಮ್ಮ ಮನೆಯಲ್ಲಿ ಫಿಟ್ ನೆಸ್ ಕಾಯ್ದುಕೊಳ್ಳುವಲ್ಲಿ ಶ್ರಮಿಸುತ್ತಿರುವುದು ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ಇವರಿಬ್ಬರ ಈ ಚಾಲೆಂಜಿಂಗ್ ವಿಡಿಯೋ ವೈರಲ್ ಆಗಿದೆ.