ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನ್ನ ನೂತನ ಟೆಸ್ಟ್ ರಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಈ ಬಾರಿ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಅವರು 911 ಪಾಯಿಂಟ್ಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದಾರೆ.
ಇದನ್ನೂ ಓದಿರಿ: ಸ್ವದೇಶಿ ಜಿಪಿಎಸ್ ನಿರ್ಮಿಸಿದ ಇಸ್ರೋ..! ಏನಿದರ ವಿಶೇಷತೆ..?
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಟೆಸ್ಟ್ ರಾಂಕಿಂಗ್ ಪಟ್ಟಿಯ ಪ್ರಕಾರ ಪ್ರಥಮ, ದ್ವಿತೀಯ ಮತ್ತು ತ್ರತೀಯ ಸ್ಥಾನವನ್ನು ಕ್ರಮವಾಗಿ ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್, ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರ ರಾಂಕಿಂಗ್ ಕುಸಿತಕ್ಕೆ ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಗಳಿಸಿದ ಕಡಿಮೆ ರನ್ ಗಳೇ ಕಾರಣವಾಗಿದೆ. ಇದರಿಂದಾಗಿ 906 ಪಾಯಿಂಟ್ಗಳನ್ನು ಗಳಿಸಿ ಎರಡನೆಯ ಸ್ಥಾನಕ್ಕೆ ತ್ರಪ್ತಿಪಡುವಂತಾಗಿದೆ.
ಒಟ್ಟಾರೆಯಾಗಿ ಭಾರತದ ನಾಲ್ವರು ಅಗ್ರ 10 ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಕ್ರಮವಾಗಿ 8,9 ಮತ್ತು 10 ನೇ ಸ್ಥಾನವನ್ನು ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ಮಯಂಕ್ ಅಗರವಾಲ್ ಪಡೆದುಕೊಂಡಿದ್ದಾರೆ.