ipl-2020-virat-kohli-cross-6000-run-mark-in-t20-league-tourney-ckm-qhzwin

ಮುಂಬೈ (ಅ.10): ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 52 ಎಸೆತಗಲ್ಲಿ ಅಜೇಯ 90 ರನ್ನುಗಳನ್ನು ಗಳಿಸುವ ಮೂಲಕ ಟಿ-20 ಟೂರ್ನಿಯಲ್ಲಿ 6000 ರನ್ನುಗಳನ್ನು ಪೂರೈಸಿದ ದಾಖಲೆಯನ್ನು ಮಾಡಿದ್ದಾರೆ.

ಚೆನ್ನೈ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ 52 ಎಸೆತಗಳಲ್ಲಿ ಅಜೇಯ 90 ರನ್ನುಗಳನ್ನು ಸಿಡಿಸಿದ್ದಾರೆ. ಈ ಮೂಲಕ ಸಿಎಸ್ ಕೆ ವಿರುದ್ಧ ಉತ್ತಮ ಸ್ಕೊರ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಸಾಧನೆಯ ಮೂಲಕ ಐಪಿಎಲ್ ಟೂರ್ನಿ ಮತ್ತು ಚಾಂಪಿಯನ್ಸ್ ಲೀಗ್ ಪಂದ್ಯಗಳಿಂದ 6000 ರನ್ನುಗಳನ್ನು ಸಿಡಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಅಬ್ಬರದ ಬ್ಯಾಟಿಂಗ್ ನಲ್ಲಿ 4 ಬೋಂಡರಿಗಳು ಮತ್ತು 4 ಸಿಕ್ಸರ್ ಗಳು ಸೇರಿವೆ. ಕೊಹ್ಲಿ ಆಟಕ್ಕೆ ಆರ್ ಸಿ ಬಿ ಪ್ಯಾನ್ಸ್ ಪುಲ್ ಫಿದಾ ಆಗಿದ್ದು, ಇಂದು ಪಂದ್ಯ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ.

LEAVE A REPLY

Please enter your comment!
Please enter your name here