Virat Kohli: ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 34ನೇ ವಸಂತಕ್ಕೆ ಕಾಲಿಟ್ಟ ವಿರಾಟ್

ವಿರಾಟ್‌ ಕೊಹ್ಲಿ | virat-kohli-birthday-celebration-for-king-kohli-greetings-from-many

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಪೋಟಕ ಬ್ಯಾಟರ್ ವಿರಾಟ್‌ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿಗೆ ಅನೇಕ ಹಿರಿಯ, ಕಿರಿಯ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ ಶುಭಶಯ ಮಹಾಪೂರವೇ ಹರಿದು ಬಂದಿದೆ.

ವಿರಾಟ್‌ ಕೊಹ್ಲಿ ಅವರ ಕಠಿಣ ಪರಿಶ್ರಮ, ಕೆಚ್ಚೆದೆಯ ನಡೆ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟರ್​ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಸದ್ಯ  ಜಿಂಬಾಬ್ವೆ ವಿರುದ್ಧದ ಮಹತ್ವದ ಪಂದ್ಯದಕ್ಕೆ ಟೀಮ್‌ ಇಂಡಿಯಾ ಮೆಲ್ಬೋರ್ನ್‌ನಲ್ಲಿ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಕೇಕ್ ಕತ್ತರಿಸಿ, ಕೊಹ್ಲಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಅವರ ಜನ್ಮದಿನದ ಸಮಯದಲ್ಲಿ ಬಿಸಿಸಿಐ ಕೂಡಾ ವಿರಾಟ್ ಕೊಹ್ಲಿ ಜನ್ಮ ದಿನಕ್ಕೆ ಶುಭ ಹಾರೈಸಿದೆ. ಇದೀಗ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದು, ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

ಗ್ಲೇನ್ ಮ್ಯಾಕ್ಸ್ ವೆಲ್ ವಿರಾಟ್ ಕೊಹ್ಲಿ ಅವರಿಗೆ ಶುಭ ಕೋರಿದ್ದಾರೆ. ಇವರು ವಿರಾಟ್ ಕೊಹ್ಲಿ ಅವರ ಜೊತೆಯಲ್ಲಿ ಆರ್ ಸಿ ಬಿ ತಂಡದಲ್ಲಿ ಜೊತೆಯಲ್ಲಿ ಆಟವಾಡಿದ್ದಾರೆ.

ಇದನ್ನೂ ಓದಿರಿ: T20 World Cup: ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಭಾರತ ಸೆಮಿಫೈನಲ್ ಗೆ ಲಗ್ಗೆ!

LEAVE A REPLY

Please enter your comment!
Please enter your name here