ಮೆಲ್ಬೋರ್ನ್ ಅಂಗಳದಲ್ಲಿ ಇಂದು ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು, ಆಸಿಸ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ಜಯಗಳಿಸಿದ ಸಾಧನೆಯನ್ನು ಮಾಡಿದೆ. ಈ ಮೂಲಕ ಈ ಸಾಧನೆ ಮಾಡಿದ ಏಷ್ಯಾ ಖಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೋಹ್ಲಿಯವರು ಪಾತ್ರರಾಗಿದ್ದಾರೆ.

ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 231 ರನ್ನುಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಗಾತ ಉಂಟಾಯಿತು. ಶಿಕರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿಯವರು ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಬೇಗನೆ ತುತ್ತಾದರು. ನಂತರ ಬಂದ ಮಹೇಂದ್ರ ಸಿಂಗ್ ದೋನಿ ಆಪತ್ಪಾಂಧವನ ಆಟವನ್ನು ಆಡಿದರು. ಇವರಿಗೆ ಉತ್ತಮ ಜೊತೆಯಾಟವನ್ನು ನೀಡಿದವರೇ ಕೇದಾರ್ ಜಾದವ್. ಇವರಿಬ್ಬರ ಸಮಯೋಚಿತ ಆಟದಿಂದಾಗಿ ಇಂದು ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನು ಗೆದ್ದು ಬೀಗುವಂತೆ ಮಾಡಿದೆ.

ಈ ಹಿಂದೆ ನಡೆದ ಆಸ್ಟೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳನ್ನೂ ಗೆದ್ದು ವಿರಾಟ್ ಕೊಹ್ಲಿ ತಂಡ ದಾಖಲೆಯನ್ನು ಮಾಡಿತ್ತು. ಈ ಮೂಲಕ ಆಸಿಸ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದು ದಾಖಲೆ ಬರೆದಂತಾಗಿದೆ. ಇದಲ್ಲದೆ ಏಷ್ಯಾ ಖಂಡದಲ್ಲಿಯೇ ಸರಣಿಯನ್ನು ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.

Image Copyright : google.com

LEAVE A REPLY

Please enter your comment!
Please enter your name here