ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆಯ ಸೋಂಕು ಹೆಚ್ಚಳವಾಗಿದೆ. ಈ ಸಂಬಂಧ ಮೊನ್ನೆ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಪಂಚಾಯತ ಮಟ್ಟದಲ್ಲಿ ಕೋವಿಡ್ ಕೇರ್ ಸ್ಥಾಪನೆಗೆ ಒಲವು ತೋರಿದ್ದಾರೆ. ಈ ಮೂಲಕ ಸರಕಾರ ಹಳ್ಳಿಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರೊಂದಿಗೆ ಪಂಚಾಯತ್ ಮಟ್ಟದಲ್ಲಿನ ಸೋಂಕಿತರ ಸಂಖ್ಯೆಗಳನ್ನು ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಅವಕಾಶ ಮಾಡಿಕೊಟ್ಟಿದೆ.
ರಾಜ್ಯ ಸರಕಾರದ ಕೋವಿಡ್ ವಾರ್ ರೂಮ್ ವೆಬ್ ಸೈಟ್ ನಲ್ಲಿ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿನ ಸೋಂಕಿತರ ಮತ್ತು ಕ್ವಾರಂಟೈನ್ ಆದವರ ಮಾಹಿತಿಯನ್ನು ಒದಗಿಸಲು ಮುಂದಾಗಿದೆ. ಈ ಮಾಹಿತಿಯನ್ನು ಪಡೆಯಲು ನೀವು covidwar.karnataka.gov.in ಈ ವೆಬ್ ಸೈಟ್ ಗೆ ತೆರಳಿದರೆ ಲಭ್ಯವಾಗಲಿದೆ. ಈ ಮೂಲಕ ನಿಮ್ಮ ಪಂಚಾಯತ ವ್ಯಾಪ್ತಿಯ ಯಾವ ಹಳ್ಳಿಯಲ್ಲಿ ಎಷ್ಟು ಸೋಂಕಿತರು ಇದ್ದಾರೆ ಎನ್ನುವ 24 ಗಂಟೆಗಳ ಹಿಂದಿನ ಸಂಪೂರ್ಣ ಮಾಹಿತಿಯು ಲಭ್ಯವಾಗುತ್ತದೆ.
ಇದನ್ನೂ ಓದಿರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ: ವಾರದಲ್ಲಿ ನಾಲ್ಕು ದಿನ ಅವಕಾಶ, ವಿವರ ನೋಡಿ.
ಹಾಗಾದರೆ ನಿಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳಲ್ಲಿ ಎಷ್ಟು ಪ್ರಕರಣಗಳಿವೆ ತಿಳಿಯಲು ಹೀಗೆ ಮಾಡಿ
- ರಾಜ್ಯ ಸರಕಾರದ ಕೋವಿಡ್ ವಾರ್ ರೂಮ್ ವೆಬ್ ಸೈಟ್ covidwar.karnataka.gov.in ಕ್ಲಿಕ್ ಮಾಡುವ ಮೂಲಕ ಪ್ರವೇಶ ಪಡೆಯಿರಿ.
- ಅಲ್ಲಿ ನೀವು ಜಿಲ್ಲಾವಾರು ಮಾಹಿತಿಯನ್ನು ಕಾಣುತ್ತೀರಿ. ಇಲ್ಲಿ ನೀವು ನಿಮ್ಮ ಪಂಚಾಯತ ಮಟ್ಟದಲ್ಲಿನ ಮಾಹಿತಿ ಪಡೆಯ ಬಯಸಿದರೆ ಕೆಳಗಿನ ಆಯ್ಕೆಗಳಲ್ಲಿ Village Wise ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ನಿಮ್ಮ ಜಿಲ್ಲೆ, ತಾಲೂಕು, ಮತ್ತು ಗ್ರಾಮ ಪಂಚಾಯತವನ್ನು ಆಯ್ಕೆ ಮಾಡಿಕೊಳ್ಳಿ.
- ನಂತರ Get Report ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿನ ಸೋಂಕಿನ ಮಾಹಿತಿಯು ಲಭ್ಯವಾಗುತ್ತದೆ.
- ಇದೆ ರೀತಿ ನೀವು ನಿಮ್ಮ ಜಿಲ್ಲಾ, ತಾಲೂಕು, ಬಿಬಿಎಂಪಿ, ವಾರ್ಡ್ ಹಾಗು ಜೋನ್ ಮಟ್ಟದಲ್ಲಿ ಮಾಹಿತಿಯನ್ನು ಬೇರ್ಪಡಿಸಿ ನೋಡುವ ಅವಕಾಶವನ್ನು ಇಲ್ಲಿ ನೀಡಲಾಗಿದೆ.