ಬೆಂಗಳೂರು: ಚಂದ್ರಯಾನ-2 ರ ಲ್ಯಾಂಡರ್ ವಿಕ್ರಮ್ ಚಂದ್ರನಮೇಲೆ ಇಳಿಯುತ್ತ 2.1 ಕಿ.ಮೀ. ದೂರ ಇರುವಾಗ ಇಸ್ರೋ ಕೇಂದ್ರದ ಸಂಪರ್ಕದಿಂದ ಕಡಿತಗೊಂಡಿತ್ತು. ಆನಂತರ ಲ್ಯಾಂಡರ್ ಯಾವಸ್ಥಿತಿಯಲ್ಲಿದೆ ಎಂದು ತಿಳಿಯಲು ಪುನಃ ಸಂಪರ್ಕಕ್ಕೆ ಸಿಗಲಿಲ್ಲ. ಆದರೆ ಸಧ್ಯ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದ್ದು, ಸೇರಕ್ಷಿತವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಮ್ ಅಂತಿಮ ಕ್ಷಣದಲ್ಲಿ ಕೈ ಕೊಟ್ಟಿತ್ತು. ಈ ರೀತಿಯ ಸಮಸ್ಯೆ ಉಂಟಾಗಲು ಕಾರಣಗಳೇನು ಎಂಬ ಕುರಿತು ಈಗಾಗಲೇ ವಿಜ್ಞಾನಿಗಳು ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ. ಸಂಪರ್ಕ ಕಡಿತಗೊಂಡು ಕೊನೆಯ ಕ್ಷಣದಲ್ಲಿ ಗುರುತಿಸಲಾಗಿದ್ದ ಸ್ಥಳದ ಪಕ್ಕದಲ್ಲಿಯೇ ಸಣ್ಣ ಪ್ರಮಾಣದ ಕ್ರಾಶ್ ಲ್ಯಾಂಡಿಂಗ್ ಆಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿತ್ತು. ಈಗ ಆರ್ಬಿಟರ್ ತನ್ನ ಆನ್ ಬೋರ್ಡ್ ಕೆಮರಾದಿಂದ ಒಂದು ಫೋಟೋ ಕಳಿಸಿದ್ದು, ಅದು ನಿಜವೆಂದು ಸಾಬೀತು ಮಾಡಿದೆ. ಈ ಫೋಟೋದ ಪ್ರಕಾರ ವಿಕ್ರಮ್ ಲ್ಯಾಂಡರ್ ಸ್ವಲ್ಪ ಓರೆಯಾಗಿ ಲ್ಯಾಂಡ್ ಆಗಿದ್ದು, ಸುರಕ್ಷಿತವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದು, ಇನ್ನೂ ಹನ್ನೆರಡು ದಿನಗಳ ಅವಕಾಶ ನಮಗಿದೆ. ಕೊನೆಯ ಕ್ಷಣದವರೆಗೂ ನಮ್ಮ ಪ್ರಯತ್ನ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ಯಶಸ್ಸು ದೊರೆಯದೆ ವಿಪಲವಾಗಿದ್ದರೂ ಇದನ್ನು ಸಂಪೂರ್ಣ ವಿಫಲ ಯೋಜನೆಯೆಂದು ಹೇಳಲು ಸಾಧ್ಯವಾದು. ಈ ಯೋಜನೆಯಲ್ಲಿ ರೋವರ್ ತನ್ನ ಕೆಲಸ ನಿರ್ವಹಿಸದೆ ಇರಬಹುದು ಆದರೆ ಆರ್ಬಿಟರ್ ತನ್ನ ಸಂಪೂರ್ಣ ಕೆಲಸವನ್ನು ಮಾಡಲಿದೆ. ಆ ಮೂಲಕ ಹೆಚ್ಚಿನ ಸಂಶೋದನೆಯನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿರಿ: ಚಂದ್ರಯಾನ-2 : ವಿಕ್ರಮ್ ರೋವರ್ ಲ್ಯಾಂಡಿಂಗ್ ನ ಸವಾಲುಗಳು
ಈ ಯೋಜನೆಯ ಮೂಲಕ ಇಸ್ರೋ ವಿಜ್ಞಾನಿಗಳ ಸಾಹಸಕ್ಕೆ ಅಮೇರಿಕಾ, ರಷ್ಯಾ, ಜಪಾನ್ ನಂತಹ ಮುಂದುವರೆದ ದೇಶದ ವಿಜ್ಞಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಯೋಜನೆಯ ಕುರಿತು ಟೀಕೆ ಮಾಡುವವರಿಗೆ ಮುಜುಗರ ಉಂಟಾಗುವಂತಾಗಿದೆ.