ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ: ವಾರದಲ್ಲಿ ನಾಲ್ಕು ದಿನ ಅವಕಾಶ, ವಿವರ ನೋಡಿ.

uttara-kannada-district-lockdown-relief-dc-order

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದಾಗಿ ಲಾಕ್ ಡೌನ್ ನಿಯಮಗಳನ್ನು ಬಿಗಿಗೊಳಿಸಲಾಗಿತ್ತು. ಆ ನಿಯಮದ ಪ್ರಕಾರ ಅಗತ್ಯವಸ್ತುಗಳ ಖರೀದಿಗೆ ಮಂಗಳವಾರ ಮತ್ತು ಶುಕ್ರವಾರ 6 ರಿಂದ 10 ರ ವರೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ದಿನಗಳಲ್ಲಿ ಜನದಟ್ಟಣೆ ಅತಿಯಾಗಿ ಹೆಚ್ಚುವುದನ್ನು ಅರಿತು ಇದೀಗ ಈ ನಿಯಮದಲ್ಲಿ ಸಡಿಲಿಕೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಈ ಹಿಂದೆ ಅಗತ್ಯ ವಸ್ತು ಕರೀದಿಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೇ ಇದೀಗ ಜನರ ದಟ್ಟಣೆ ತಪ್ಪಿಸಲು ಜನರ ಅಗತ್ಯ ವಸ್ತು ಕರೀದಿಗೆ ನಾಲ್ಕು ದಿನ ಅವಕಾಶ ಮಾಡಿಕೊಟ್ಟಿದೆ. ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಅಗತ್ಯ ವಸ್ತುಗಳ ಕರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಈ ಹಿಂದೆ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ಇದ್ದ ಸಮಯವನ್ನು ಬೆಳಗ್ಗೆ 8 ರಿಂದ 12 ರ ವರೆಗೆ ಏರಿಕೆ ಮಾಡಿ ಅವಕಾಶ ಮಾಡಿಕೊಟ್ಟಿದೆ. ಇನ್ನು ಶುಕ್ರವಾರ ,ಶನಿವಾರ,ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಸೈಕ್ಲೋನ್ ಪ್ರಭಾವದಿಂದಾಗಿ 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ: ಯಾವಾಗ ಬರಲಿದೆ ಫುಲ್ ಡಿಟೈಲ್ಸ್ ಇಲ್ಲಿದೆ

uttara-kannada-district-lockdown-relief-dc-order

uttara-kannada-district-lockdown-relief-dc-order

LEAVE A REPLY

Please enter your comment!
Please enter your name here