ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕೊರೊನಾ ಪ್ರಕರಣಗಳೆಷ್ಟು ಗೊತ್ತೇ ?

Corona Updates in Uttarakannada

ಕಾರವಾರ : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ತಮ್ಮ ತಮ್ಮ ಊರುಗಳಿಗೆ ಬರಲು ಅವಕಾಶ ನೀಡಿದ ನಂತರ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇದ್ದಕ್ಕಿದ್ದಂತೆ ಒಮ್ಮೆಲೆ ಹೆಚ್ಚಿತು. ಅದಕ್ಕೂ ಮೊದಲು ಜಿಲ್ಲೆಯಲ್ಲಿನ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಸೋಂಕಿನ ಹರಡುವಿಕೆ ನಿಯಂತ್ರದಲ್ಲಿತ್ತು. ಸಧ್ಯ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆಗಳು ಎಷ್ಟಿರಬಹುದು ಎನ್ನುವ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..

ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಸೋಂಕಿನ ಒಟ್ಟು ಸಂಖ್ಯೆ 1785 ಮಾತ್ರ. ಇವುಗಳಲ್ಲಿ ತಾಲೂಕಾವಾರು ಸಂಖ್ಯೆಯನ್ನು ನೋಡುವುದಾದರೆ, ಕಾರವಾರ 146, ಅಂಕೋಲಾ 92, ಕುಮಟಾ 217, ಹೊನ್ನಾವರ 120, ಭಟ್ಕಳ 392, ಸಿರಸಿ 163, ಸಿದ್ದಾಪುರ 31, ಯಲ್ಲಾಪುರ 84, ಮುಂಡಗೋಡ 93, ಹಳಿಯಾಳ 432, ಜೊಯಿಡಾ 15 ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿವೆ.   .

ಇನ್ನು ತಾಲೂಕಾವಾರು ಸಕ್ರೀಯ ಮತ್ತು ಗುಣಮುಖರಾದವರ ಸಂಖ್ಯೆಯನ್ನು ನೋಡುವುದಾದರೆ, .

  • ಕಾರವಾರದಲ್ಲಿ 67 ಜನರು ಗುಣಮುಖ, 77 ಸಕ್ರೀಯ ಪ್ರಕರಣಗಳು.
  • ಅಂಕೋಲಾದಲ್ಲಿ 59 ಜನರು ಗುಣಮುಖ, 32 ಸಕ್ರೀಯ ಪ್ರಕರಣಗಳು.
  • ಕುಮಟಾದಲ್ಲಿ 158 ಜನರು ಗುಣಮುಖ, 59 ಸಕ್ರೀಯ ಪ್ರಕರಣಗಳು.
  • ಹೊನ್ನಾವರದಲ್ಲಿ 93 ಜನರು ಗುಣಮುಖ, 27 ಸಕ್ರೀಯ ಪ್ರಕರಣಗಳು.
  • ಭಟ್ಕಳದಲ್ಲಿ 268 ಜನರು ಗುಣಮುಖ, 118 ಸಕ್ರೀಯ ಪ್ರಕರಣಗಳು.
  • ಸಿರಸಿಯಲ್ಲಿ 71 ಜನರು ಗುಣಮುಖ, 89 ಸಕ್ರೀಯ ಪ್ರಕರಣಗಳು.
  • ಸಿದ್ದಾಪುರದಲ್ಲಿ 16 ಜನರು ಗುಣಮುಖ, 15 ಸಕ್ರೀಯ ಪ್ರಕರಣಗಳು.
  • ಯಲ್ಲಾಪುರದಲ್ಲಿ 70 ಜನರು ಗುಣಮುಖ, 13 ಸಕ್ರೀಯ ಪ್ರಕರಣಗಳು.
  • ಮುಂಡಗೋಡದಲ್ಲಿ 67 ಜನರು ಗುಣಮುಖ, 25 ಸಕ್ರೀಯ ಪ್ರಕರಣಗಳು.
  • ಹಳಿಯಾಳದಲ್ಲಿ 148 ಜನರು ಗುಣಮುಖ, 281 ಸಕ್ರೀಯ ಪ್ರಕರಣಗಳು.
  • ಜೋಯಿಡಾದಲ್ಲಿ 8 ಜನರು ಗುಣಮುಖ, 7 ಸಕ್ರೀಯ ಪ್ರಕರಣಗಳು.

ಇನ್ನು ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ರಿಂದಾಗಿ 17 ಸಾವಾಗಿದೆ. ಇವುಗಳನ್ನು ತಾಲೂಕಾವಾರು ನೋಡುತ್ತಾ ಹೋದರೆ ಭಟ್ಕಳ 6, ಸಿರಸಿ 3, ಹಳಿಯಾಳ 3, ಕಾರವಾರ 2, ಯಲ್ಲಾಪುರ 1, ಮುಂಡಗೋಡ, ಅಂಕೋಲಾ 1 ಸಾವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇನ್ನುಳಿದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರ್ಯಾಪಿಡ್ ಟೆಸ್ಟಿಂಗ್ ಸಹ ನಡೆಸಲಾಗುತ್ತಿದ್ದು, ವೇಗವಾಗಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಇದರೊಂದಿಗೆ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಐಸೊಲೆಶನ್ ಮಾಡುವ ಮೂಲಕ ಹರಡುವಿಕೆಗೆ ಬ್ರೇಕ್ ಹಾಕಲಾಗಿದೆ.

ಇದನ್ನೂ ಓದಿರಿ: Breaking News: ರಾಜ್ಯದಲ್ಲಿ ಒಂದು ಲಕ್ಷದ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

LEAVE A REPLY

Please enter your comment!
Please enter your name here