ವಾಷಿಂಗ್ಟನ್: ಅಮೆರಿಕಾದಲ್ಲಿ ವಿದೇಶಿ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳುವುದಾದರೆ ಅಂತವರ ವೀಸಾ ರದ್ದು ಪಡಿಸಲಾಗುವುದು ಎಂಬ ಆದೇಶದವನ್ನು ಅಮೇರಿಕಾ ಹಿಂದಕ್ಕೆ ಪಡೆದಿದೆ.
ಅಮೇರಿಕಾದಲ್ಲಿ ಶಿಕ್ಷಣ ಪಡೆಯಲು ತಂಗಿದ್ದವರಿಗೆ ಕೊರೊನಾ ಕಾರಣದಿಂದ ಆನ್ಲೈನ್ ತರಗತಿಗಳನ್ನು ಪಡೆಯುವ ಅವಶ್ಯಕತೆಯು ಬಂದೊದಗಿದೆ. ಈ ಕುರಿತು ಡೊನಾಲ್ಡ್ ಟ್ರಂಪ್ ಸರಕಾರ ಆನ್ಲೈನ್ ತರಗತಿಗಳನ್ನು ಪಡೆದುಕೊಳ್ಳುವವರು ತಮ್ಮ ದೇಶವನ್ನು ಬಿಟ್ಟು ಹೋಗಬಹುದು. ಅಂತವರಿಗೆ ಅಕ್ಟೋಬರ್ ಬಳಿಕ ವೀಸಾ ನೀಡಲು ಸಾಧ್ಯವಿಲ್ಲ ಎಂದು ಆದೇಶವನ್ನು ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಹಾರ್ವರ್ಡ್ ಮತ್ತು ಎಂಐಟಿ ಶಿಕ್ಷಣ ಸಂಸ್ಥೆಗಳು, ತಮ್ಮಲ್ಲಿ ಹಲವಾರು ಅಂತರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಅವರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಸರಕಾರದ ಈ ನಿರ್ಧಾರದ ವಿರುದ್ದ ಮೊಕದ್ದಮೆ ಹೂಡಿದ್ದವು. ಈ ಬೆಳವಣಿಗೆಗಳ ನಂತರ ಅಮೇರಿಕ ಸರಕಾರ ತನ್ನ ಆದೇಶವನ್ನು ಹಿಂಪಡೆಡಿದೆ ಎಂದು ಹೇಳಲಾಗಿದೆ.