ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಹಾಗೂ ಅವರ ಪತಿ ಡೌಗ್ ಎಂಹೊಫ್ ಅವರು ವಾಷಿಂಗ್ಟನ್‍ನ ತಮ್ಮ ನಿವಾಸದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ದೀಪಾವಳಿ ಹಬ್ಬವನ್ನು ಕೇವಲ ಭಾರತ ಮಾತ್ರವಲ್ಲ, ವಿವಿಧ ದೇಶಗಳಲ್ಲಿಯೂ ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ವಿದೇಶಿ ರಾಜಕಾರಣಿಗಳು ಸಹ ಭಾರತೀಯ ಹಬ್ಬಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಅಂತೆಯೇ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಹಲವು ಜನರೊಂದಿಗೆ ದೀಪದ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ. ಈ ಕುರಿತಂತೆ ಅವರು ವಿಡಿಯೋ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
.@VP and @SecondGentleman during a Diwali Celebration at the VP’s Residence this evening.
🎥: neilmakhija on Instagram. pic.twitter.com/w8wq7tu1PB
— best of kamala harris (@archivekamala) October 22, 2022