ಕೇಂದ್ರ ಲೋಕಸೇವಾ ಆಯೋಗ (Union Public Service Commission) ವು ಫ್ಯಾಕಲ್ಟಿ ಮತ್ತು ಟ್ಯೂಟರ್ ಹುದ್ದೆಗಳಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಪ್ಲಿಕೇಶನ್ ಸಲ್ಲಿಸಬಹುದು.
ಹುದ್ದೆಗಳ ವಿವರ :
ಪ್ರೊಫೆಸರ್ – 1
ಅಸೋಸಿಯೇಟ್ ಪ್ರೊಫೆಸರ್ – 6
ಟ್ಯೂಟರ್ – 14
ವಿದ್ಯಾರ್ಹತೆ :
ಕೇಂದ್ರ ಲೋಕಸೇವಾ ಆಯೋಗದ ಫ್ಯಾಕಲ್ಟಿ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವವರು ಹುದ್ದೆಗಳಿಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ ಜತೆಗೆ, ಎನ್‌ಇಟಿ, ಎಸ್‌ಎಲ್‌ಇಟಿ, ಪಿಹೆಚ್‌ಡಿ, ಇಂಜಿನಿಯರಿಂಗ್, ಬಿಟೆಕ್ ಪಾಸ್ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಲೋಕಸೇವಾ ಆಯೋಗದ ಡೀಟೇಲ್ಡ್ ನೋಟಿಫಿಕೇಶನ್ ನೋಡಿ.
ಅರ್ಜಿ ಸಲ್ಲಿಕೆಯ ಶುಲ್ಕ :
ಕೇಂದ್ರ ಲೋಕಸೇವಾ ಆಯೋಗದ ಫ್ಯಾಕಲ್ಟಿ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಶುಲ್ಕ ರೂ.25 ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ :
ಕೇಂದ್ರ ಲೋಕಸೇವಾ ಆಯೋಗದ ಫ್ಯಾಕಲ್ಟಿ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ :
ಅಪ್ಲಿಕೇಶನ್ ಸಲ್ಲಿಸಲು ವೆಬ್‌ಸೈಟ್ ವಿಳಾಸ upsc.gov.in ಗೆ ತೆರಳಿ, ಅಭ್ಯರ್ಥಿಗಳು ಡಿಸೆಂಬರ್ 16, 2021 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 17, 2021 ರೊಳಗೆ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 01/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/12/2021
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ :17/12/2021