up-population-draft-bill-those-with-over-two-kids-cant-contest-local-polls-apply-for-govt-jobs

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಮಸೂದೆಯ ಪ್ರಕಾರ 2 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುವುದು, ಸರಕಾರಿ ಉದ್ಯೋಗ ಪಡೆಯುವುದು, ಈಗಾಗಲೇ ಸರಕಾರಿ ಉದ್ಯೋಗದಲ್ಲಿರುವವರಿಗೆ ಮುಂಬಡ್ತಿಯಲ್ಲಿ, ಸರಕಾರದ ವಿವಿಧ ಸಬ್ಸಿಡಿಗಳನ್ನು ತಡೆ ಹಿಡಿಯಲು ಯೋಜನೆ ರೂಪಿಸಿದೆ.

ಉತ್ತರ ಪ್ರದೇಶ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದ್ದು, ಈ ಮೂಲಕ ಜನಸಂಖ್ಯೆಯ ನಿಯಂತ್ರಣಕ್ಕೆ ಸರಕಾರ ಮುಂದಾಗಿದೆ. ಈ ಮಸೂದೆಯು ಉತ್ತರ ಪ್ರದೇಶದ ರಾಜ್ಯ ಕಾನೂನು ಆಯೋಗದ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ. ಸದ್ಯ ಈ ಮಸೂದೆಗೆ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಬಹುದಾಗಿದ್ದು, ಜು. 19 ಕೊನೆಯದಿನವಾಗಿದೆ.

ಈ ಮಸೂದೆಯಲ್ಲಿ ಒಂದು ಮಗುವನ್ನು ಹೊಂದಿರುವವರಿಗೆ ಸರಕಾರಿ ನೌಕರಿ ಪಡೆಯಲು ವಿವಿಧ ಪ್ರೋತ್ಸಾಹಗಳು, ಮುಂಬಡ್ತಿಯಲ್ಲಿ ವಿಶೇಷ ರೀಯಾಯಿತಿ ಸೇರಿದಂತೆ ಹಲವು ಪ್ರೋತ್ಸಾಹಕಗಳನ್ನು ನೀಡಲಿದೆ. ನೌಕರರಲ್ಲದ ಸಾಮಾನ್ಯರಿಗೆ ನೀರು, ವಸತಿ, ಗೃಹ ಸಾಲಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲಿದೆ. ಒಂದು ಮಗುವನ್ನು ಪಡೆದು ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡರೆ ಮಗುವಿಗೆ 20 ವರ್ಷಗಳವರೆಗೆ ಉಚಿತ ಆರೋಗ್ಯ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲು ಪ್ರಸ್ತಾಪಿಸಲಾಗಿದೆ.

LEAVE A REPLY

Please enter your comment!
Please enter your name here