ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ವಿವಾದದ ಪ್ರಕರಣ ಬಗೆಹರಿದು ದೇವಾಲಯ ನಿರ್ಮಾಣವಾಗುವ ಸೂಚನೆಗಳೇ ದೊರೆಯುತ್ತಿಲ್ಲ. ವಿವಾಧ ಬಗೆಹರಿದು ಮರ್ಯಾಧಾ ಪುರುಷೋತ್ತಮ ಶ್ರೀರಾಮಚಂದ್ರನ ದೇವಾಲಯ ನಿರ್ಮಾಣವಾಗಲಿ ಎಂದು ಸಾವಿರಾರು ಭಕ್ತರು ಕಾದಿದ್ದಾರೆ. ಇಂತಹ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಯ ವಿಶೇಷ ಉಡುಗೊರೆಯಾಗಿ ಹೊಸದೊಂದು ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ಸರಯೂ ನದಿಯ ತಟದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
ಅಯೋಧ್ಯೆಯ ಸಮಸ್ಯೆ ಬಗೆಹರಿಯುವ ಮುನ್ನ ಸರಯೂ ನದಿಯ ತಟದಲ್ಲಿ ಸರ್ಧಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯಂತೆಯೇ ನಿರ್ಮಾಣ ಮಾಡಿ, ಪ್ರವಾಸಿಗರನ್ನು ಆಕರ್ಷಿಸಲು ಬಯಸಿದ್ದಾರೆ. ಇಲ್ಲಿ 36 ಮೀಟರ್ ಎತ್ತರದ ಪೀಠದ ಮೇಲೆ 100 ಮೀ. ಎತ್ತರದ ಶ್ರೀರಾಮನ ವಿಗ್ರಹ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸುಮಾರು 350 ಕೋಟಿ ವೆಚ್ಚದಲ್ಲಿ ನವ ಅಯೋಧ್ಯಾ ಎಂಬ ಪ್ರವಾಸಿ ತಾಣವನ್ನೇ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಪೋಟೋ: ಗೂಗಲ್ ಕ್ರಪೆ
ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಒಡೆತನದ ಕುರಿತಾದ ವಿವಾಧದ ವಿಚಾರಣೆಯನ್ನು ಸುಪ್ರಿಂ ಕೋರ್ಟ್ 2019 ಜನವರಿಗೆ ಮುಂದೂಡಿದ ಬೇಸರದಲ್ಲಿ ಭಕ್ತರಿಗೆ ಸ್ವಲ್ಪ ಮಟ್ಟಿನ ಖುಷಿ ದೊರೆತಂತಾಗಿದೆ.