ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ 4.0 ಮಾರ್ಗಸೂಚಿ ಘೋಷಣೆಯಾಗಿದ್ದು, ನಾಳೆಯಿಂದ ರಾಜ್ಯದಾದ್ಯಂತ ಥಿಯೇಟರ್ ಓಪನ್ ಆಗಲಿದೆ. ಇದ್ದಲ್ಲದೇ ರಾಜ್ಯದಲ್ಲಿ ಈಗಿರುವ ನೈಟ್ ಕರ್ಫ್ಯೂ ಒಂದು ಗಂಟೆ ಸಡಿಲಮಾಡಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಶಾಸಕರು ಮತ್ತು ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ, ನಂತರ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಈಗಿರುವ ನೈಟ್ ಕರ್ಫ್ಯೂವನ್ನು ಸಡಿಲಗೊಳಿಸಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ರ ವರೆಗೆ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.
ರಾಜ್ಯದಾದ್ಯಂತ ನಾಳೆಯಿಂದಲೇ ಥಿಯೇಟರ್ ಓಪನ್ ಮಾಡಲು ಅನುಮತಿ ನೀಡಿದ್ದು, ಶೇ 50 ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಲಾಗಿದೆ. ಇನ್ನು ಪಬ್ ಮತ್ತು ಈಜುಕೊಳ ತೆರೆಯಲು ಸರಕಾರ ಯಾವುದೇ ಅವಕಾಶ ನೀಡಿಲ್ಲ.