union-ministers-leaders-tweet-tributes-to-dr-apj-abdul-kalam-death-anniversary

ಇಂದು ರಾಷ್ಟ್ರ ಕಂಡ ಕ್ಷಿಪಣಿ ಬ್ರಹ್ಮ, ಭಾರತದ 11 ನೇ ರಾಷ್ಟ್ರಪತಿ, ಅದ್ಬುತ ಶಿಕ್ಷಕ, ದೇಶ ಪ್ರೇಮಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನ. ಅವರ ಜನ್ಮ ದಿನದ ಈ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಷಯ ಕೋರಿದ್ದಾರೆ.

ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಂದರವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, “ವಿಜ್ಞಾನಿಯಾಗಿ ಮತ್ತು ಭಾರತದ ರಾಷ್ಟ್ರಪತಿಯಾಗಿ, ರಾಷ್ಟ್ರೀಯ ಅಭಿವೃದ್ಧಿಗೆ ಅವರು ನೀಡಿದ ಮಹಾನ್ ಕೊಡುಗೆಯನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಜೀವನ ಪಯಣ ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ಡಾ.ಕಲಾಂ ಅವರಿಗೆ ಅವರ ಜನ್ಮದಿನದಂದು ಗೌರವ ಸಲ್ಲಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

“ದೇಶ ಕಂಡ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ದೇಶದ ಯ್ವಜನತೆಗೆ ಮಾದರಿಯಾಗಿದ್ದಾರೆ. ಪುಣ್ಯ ತಿಥಿಯ ಈ ದಿನದಂದು ನನ್ನ ನಮನಗಳು” ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವಿಟ್ ಮಾಡಿದ್ದಾರೆ.

 

“ಅಬ್ದುಲ್ ಕಲಾಂ ಅವರಿಗೆ ನನ್ನ ನಮನಗಳು, ಜ್ಞಾನ, ವಿವೇಕ ಹಾಗೂ ಸರಳತೆಯ ವ್ಯಕ್ತಿಯಾಗಿದ್ದ ಅವರು ವಿಜ್ಞಾನದಿಂದ ಹಿಡಿದು ರಾಜಕೀಯ ಕ್ಷೇತ್ರದಲ್ಲೂ ಪಾಂಡಿತ್ಯ ಸಾಧಿಸಿದ್ದರು. ಭಾರದ ಸ್ವಾವಲಂಭಿ ಜ್ಞಾನದ ಪರಿಕಲ್ಪನೆಗೆ ಅವರು ಪ್ರೇರಣೆಯಾಗಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಟ್ವಿಟ್ ಮಾಡಿದ್ದಾರೆ.

ಈ ವಿಶೇಷ ಸಮಯದಲ್ಲಿ ಟ್ವಿಟ್ ಮಾಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ” ಭಾರತದ ’ಮಿಸೈಲ್ ಮ್ಯಾನ್’, ದೇಶದ 11ನೇ ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಶ್ರೀ ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಪುಣ್ಯ ತಿಥಿಯಂದು ಅವರನ್ನು ಸ್ಮರಿಸೋಣ. ಅವರ ಬದುಕು, ಸಾಧನೆ, ವ್ಯಕ್ತಿತ್ವಗಳು ಆದರ್ಶಪ್ರಾಯವಾಗಿದ್ದು, ಕೋಟ್ಯಂತರ ಜನರಿಗೆ ನಿರಂತರ ಸ್ಫೂರ್ತಿ ನೀಡುತ್ತಿವೆ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here