ಶಾಲೆಯ ಬಸ್ ನಿಂದ ಕೆಳಗೆ ಬಿದ್ದು ಯು.ಕೆ ಜಿ ವಿದ್ಯಾರ್ಥಿ ಸಾವು

ukg-student-fallen-from-school-bus-lost-life

ರಾಮನಗರ: ಶಾಲಾ ಬಸ್ ನಿಂದ ಕೆಳಗೆ ಬಿದ್ದು 5 ವರ್ಷದ ಯು.ಕೆ ಜಿ ವಿದ್ಯಾರ್ಥಿ ಬಾಲಕಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿಯ ಪಿಚ್ಚನಕೆರೆಯಲ್ಲಿ ನಡೆದಿದೆ.

ಸೋಮವಾರ ಶಾಲೆ ಮುಗಿಸಿ ಮನೆಗೆ ತೆರಳುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಶಾಲಾವಾಹನದಲ್ಲಿ ಮನೆಗೆ ಹೋರಾಟ ಮಗು ಸೀಟಿನಲ್ಲಿ ಕುಳಿತಿತ್ತು. ಆದರೆ ತಿರುವಿನಲ್ಲಿ ವಾಹನ ತಿರುಗಿಸಿದಾಗ ಬಾಗಿಲು ಹಾಕಿರದ ಕಾರಣ ಮಗು ರಸ್ತೆಗೆ ಬಿದ್ದಿದೆ. ಆ ಕ್ಷಣದಲ್ಲಿ ಬಸ್ಸಿನ ಹಿಂಬದಿಯ ಚಕ್ರ ಮಗುವಿನ ತಲೆಯ ಮೇಲೆ ಹರಿದಿದೆ. ಇದರಿಂದಾಗಿ ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ಸಂಬಂಧ ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಬಸ್ ಚಾಲಕ ಮತ್ತು ಬಸ್ ನಲ್ಲಿ ಇದ್ದ ಆಯಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿರಿ: ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ: ಅಫ್ತಾಬ್‌ಗೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ದೆಹಲಿ ನ್ಯಾಯಾಲಯ

LEAVE A REPLY

Please enter your comment!
Please enter your name here