ಬಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ಸದ್ಯದಲ್ಲಿ ಗ್ರಹಚಾರ ನೆಟ್ಟಗಿರುವಂತೆ ಕಾಣುತ್ತಿಲ್ಲ. ಹೌದು ಮಿತ್ರರೇ.. ವಿಶ್ವದ ರಾಷ್ಟ್ರಗಳೆಲ್ಲ ಒಂದರ ಮೇಲೆ ಒಂದರಂತೆ ಪಾಕ್ ಗೆ ಶಾಕ್ ನೀಡುತ್ತಿವೆ. ಪುಲ್ವಾಮಾ ಘಟನೆ ನಡೆದ ನಂತರವಂತು ಜಗತ್ತಿನ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುವ ಮನಸ್ಸು ಮಾಡುತ್ತಿಲ್ಲ. ಕಳೆದ ವಾರವಷ್ಟೆ F16 ವಿಮಾನದ ಬಳಕೆಯ ವಿಚಾರವಾಗಿ ಎಚ್ಚರಿಕೆಯನ್ನು ನೀಡಿದ್ದ ಅಮೇರಿಕಾ ಸರಕಾರ ಈಗ ಮತ್ತೊಂದು ಶಾಕ್ ನೀಡಿದೆ.

ಪಾಕಿಸ್ತಾನಿಯರು ಅಮೇರಿಕಕ್ಕೆ ತೆರಳಲು ಸದ್ಯ ಐದು ವರ್ಷಗಳ ವೀಸಾವನ್ನು ನೀಡಲಾಗುತ್ತಿತ್ತು. ಆದರೆ ಈ ನಿರ್ಧಾರವನ್ನು ಬದಲಿಸಿರುವ ಟ್ರಾಂಪ್ ಸರಕಾರ ಕೇವಲ ಮೂರು ತಿಂಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಮೇಲೆ ಅಮೇರಿಕಕ್ಕೆ ತೆರಳಲು ಬಯಸುವ ನಾಗರೀಕರಿಗೆ ಮೂರು ತಿಂಗಳ ಅವಧಿಯ ವೀಸಾ ಲಭಿಸಲಿದೆ.

ಪಾಕಿಸ್ತಾನಿಯರ ಮೇಲೆ ಈ ವಿಶೇಷ ಅಸ್ತ್ರವನ್ನು ಅಮೇರಿಕ ಪ್ರಯೋಗಿಸಿದ್ದು, ಇದು ಪಾಕಿಸ್ತಾನಿ ಮಾಧ್ಯಮದವರಿಗೂ ಅನ್ವಯವಾಗಲಿದೆ ಎಂದು ಸ್ಪಷ್ಟ ಪಡಿಸಲಾಗಿದೆ. ಅಲ್ಲದೇ ವೀಸಾ ಪಡೆಯಲು ಸಲ್ಲಿಸುವ ಅರ್ಜಿಯ ಶುಲ್ಕವನ್ನೂ ಏರಿಕೆ ಮಾಡಿದೆ. ಮೊದಲಿದ್ದ 160 ಡಾಲರ್ ಮೊತ್ತದಿಂದ 192ಡಾಲರ್ ಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ.

Image copyright:google.com

 

LEAVE A REPLY

Please enter your comment!
Please enter your name here