twitter-website-displays-distorted-map-of-india-jammu-kashmir-ladakh-shown-as-separate-country

ನವದೆಹಲಿ: ಭಾರತದಲ್ಲಿ ವ್ಯವಹಾರವನ್ನು ಮಾಡಬೇಕೆಂದರೆ ಭಾರತದ ಕಾನೂನನ್ನು ಪಾಲಿಸುವುದು ಅವಶ್ಯ ಎಂದು ಕೇಂದ್ರ ಸರಕಾರ ಹೇಳಿದೆ. ಈ ಸಂಬಂಧ ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಸೇರಿದಂತೆ ವಿದೇಶಿ ಸಾಮಾಜಿಕ ಜಾಲತಾಣ ದಿಗ್ಗಜರಿಗೆ ನೋಟಿಸ್ ಜಾರಿಮಾಡಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಆದರೆ ಟ್ವಿಟ್ಟರ್ ಇದಕ್ಕೆ ಮೊದಲಿನಿಂದಲೂ ಕಿರಿಕ್ ಮಾಡಿಕೊಂಡೆ ಬಂದಿದೆ. ಇಷ್ಟು ದಿನ ಕೆಲವೊಂದಿಷ್ಟು ಜನ ಕೇಂದ್ರ ಸರಕಾರದ ಪರವಾಗಿ ನಿಂತಿದ್ದಾರೆ ಮತ್ತೆ ಕೆಲವರು ಟ್ವಿಟ್ಟರ್ ದು ಯಾವುದೇ ತಪ್ಪಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಆದರೆ ಸದ್ಯ ಟ್ವಿಟ್ಟರ್ ಮಾಡಿಕೊಂಡ ಒಂದು ಎಡವಟ್ಟಿನಿಂದ ದೇಶದ ಜನರು ಕೆರಳುವಂತೆ ಮಾಡಿದೆ.

ಅಷ್ಟಕ್ಕೂ ಟ್ವಿಟ್ಟರ್ ಏನು ಮಾಡಿತು ಎಂದು ಕೇಳುತ್ತೀರಾ ?ಹೇಳುತ್ತೇವೆ ಓದಿ.. ಕೇಂದ್ರ ಸರಕಾರವನ್ನು ಕೆಣಕುವ ಭರದಲ್ಲಿ ಟ್ವಿಟ್ಟರ್ ಭಾರತದ ಭೂಪಟದಲ್ಲಿ ಲಡಾಕ್ ಮತ್ತು ಜಮ್ಮು ಕಾಶ್ಮೀರವನ್ನೇ ಬಿಟ್ಟಿದೆ. ಇದು ದೇಶದ ಪ್ರತಿಯೊಬ್ಬನನ್ನು ಕೆರಳುವಂತೆ ಮಾಡಿರುವುದು ಸುಳ್ಳಲ್ಲ. ಭಾರತದ ನಕ್ಷೆಗೆ ಒಂದು ಬಣ್ಣವನ್ನು ನೀಡಿ, ಜಮ್ಮು-ಕಾಶ್ಮೀರ ಮತ್ತು  ಲಡಾಕ್ ಗೆ ಇತರ ದೇಶಗಳ ಬಣ್ಣವನ್ನು ನೀಡಿದೆ. ಈ ಮೂಲಕ ಭಾರತದಿಂದ ಲಡಾಕ್ ಮತ್ತು ಜಮ್ಮು-ಕಾಶ್ಮೀರ ಕೈಬಿಟ್ಟಿದೆ.

ಇದನ್ನೂ ಓದಿರಿ: SSLC Exam Time table: ಜುಲೈ 19-22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ; ವೇಳಾಪಟ್ಟಿ ಮತ್ತು ನಿಯಮಗಳ ಸಂಪೂರ್ಣ ಮಾಹಿತಿ

ಟ್ವಿಟ್ಟರ್ ನಡೆದುಕೊಳ್ಳುತ್ತಿರುವ ವಿಚಾರಗಳಿಂದ ಕ್ರೋದಗೊಂಡ ಜನ ಬ್ಯಾನ್ ಟ್ವಿಟ್ಟರ್ (#BanTWITTER) ಎಂಬ ಹ್ಯಾಶ್ ಟ್ಯಾಗ್ ಅಭಿಯಾನವನ್ನು ಆರಂಭಿಸಿದ್ದಾರೆ. ಭಾರತದ ಕಾನೂನುಗಳನ್ನು ಒಪ್ಪದ ಮತ್ತು ಭಾರತೀಯರ ದೇಶಪ್ರೇಮವನ್ನು ಕೆರಳಿಸುವಂತೆ ಮಾಡುತ್ತಿರುವ ಟ್ವಿಟ್ಟರ್ ನಮಗೆ ಅವಶ್ಯಕತೆ ಇಲ್ಲಾ ಎಂದು ರೊಚ್ಚಿಗೆದ್ದಿದ್ದಾರೆ.

ಕೇಂದ್ರದ ಕಾನೂನನ್ನು ಪಾಲಿಸದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೋರ್ಟ್ ಮೆಟ್ಟಿಲೇರಿರುವ ಟ್ವಿಟ್ಟರ್, ಈ ರೀತಿಯಾಗಿ ದೇಶದ ವಿರುದ್ಧ ಅವಮಾನಿಸುತ್ತಿರುವುದು ಇದೇ  ಮೊದಲಲ್ಲ. ಭಾರತ-ಚೀನಾ ಸಂಘರ್ಷದ ಸಮಯದಲ್ಲಿಯೂ ಭಾರತದ ಲೇಹ್ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸಿತ್ತು.

ದೇಶದ ಕಾನೂನು ಒಪ್ಪದ, ನಮ್ಮಲ್ಲಿ ವ್ಯವಹಾರ ಮಾಡಿಕೊಂಡು ನಮಗೆ ದ್ರೋಹವೆಸಗುವ ಇಂತಹ ವಿದೇಶಿ ಕಂಪನಿಗಳನ್ನು ನಾವು ತ್ಯಜಿಸಿ, ಭಾರತದ ಕಂಪೆನಿಗಳೆಡೆಗೆ ತಿರುಗೋಣ. ಸದ್ಯ ನಮ್ಮಲ್ಲಿ ಟ್ವಿಟ್ಟರ್ ಗೆ ಸೆಡ್ಡು ನೀಡಲು ಕೂ ಆಫ್ ಬೆಳೆಯುತ್ತಿದ್ದು, ನಮ್ಮೆಲ್ಲರ ಬದಲಾವಣೆಯಿಂದ ಇಂತಹ ಕೊಬ್ಬಿರುವ ವಿದೇಶಿ ಕಂಪನಿಗಳ ಸೊಕ್ಕನ್ನು ಅಡಗಿಸೋಣ…

ಇದನ್ನೂ ಓದಿರಿ: ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ತೋಳು ನೋವು ಬರಲು ಕಾರಣವೇನು? ಆ ನೋವನ್ನು ಕಡಿಮೆ ಮಾಡುವುದು ಹೇಗೆ?

ಕೂ ಆಫ್ ನಲ್ಲಿ ನಮ್ಮನ್ನು ಫಾಲೋ ಮಾಡಿ.. Follow

LEAVE A REPLY

Please enter your comment!
Please enter your name here