ಕೇಂದ್ರ ಸರಕಾರದ ಮೋಟಾರು ವಾಹನ ಕಾಯಿದೆ, ಕೇಂದ್ರ ಕಾರ್ಮಿಕ ವಿರೋದಿ ನೀತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಗಟನೆಗಳು ನಾಳೆ ಮತ್ತು ನಾಡಿದ್ದು ಭಾರತ್ ಬಂದ್ ಗೆ ಕರೆನೀಡಿವೆ.
ಈ ಮುಷ್ಕರಕ್ಕೆ ದೇಶದಾದ್ಯಂತ ಎಐಟಿಸಿ, ಹೆಚ್ ಇ ಯು ಸಿ, ಸಿಐಟಿಯು, ಅಖಿಲ ಭಾರತ ಕಾರ್ಮಿಕರ ಸಂಘಟನೆಗಳು ಸೇರಿ ಒಟ್ಟು 09 ಸಂಘಟನೆಗಳು ಕರೆ ನೀಡಿದ್ದು, ಸಾರಿಗೆ ಒಕ್ಕೂಟಗಳೂ ಬೆಂಬಲ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ, ಬಿ ಎಂ ಟಿ ಸಿ, ಕಾಸಗಿ ಬಸ್ ಸೇವೆಗಳು, ಓಲಾ, ಉಬರ್, ಕ್ಯಾಬ್, ಆಟೋಗಳು ಸೇರಿದಂತೆ ಹಲವು ವಾಹನಗಳು ನಾಳೆ ರಸ್ತೆಗೆ ಇಳಿಯುವುದು ಸಂಶಯವೇ ಆಗಿದೆ. ಕಾಸಗಿ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದ್ದು, ಸರಕಾರೀ ಶಾಲೆಗಳಿಗೆ ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.
ಇನ್ನು ದಿನನಿತ್ಯದ ಅಗತ್ಯ ವಸ್ತುಗಳು, ತುರ್ತು ಸೇವೆಗಳು ಮತ್ತು ಆಸ್ಪತ್ರೆ, ಮೆಡಿಕಲ್ ಶಾಪ್ ಗಳು ಆಂಬುಲೆನ್ಸ್ ಸೇವೆಗಳು ಎಂದಿನಂತೆಯೇ ಲಭ್ಯವಾಗಲಿವೆ. ಎಂದಿನಂತೆಯೇ ಹಾಲು, ತರಕಾರಿ, ಪೇಪರಗಳು ಲಭ್ಯವಾಗಲಿವೆ. ಭಾರತ್ ಬಂದ್ ಗೆ ಹೋಟೆಲ್ ಒಕ್ಕೂಟಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಸ್ಥಳೀಯ ಹೋಟೆಲ್ ಗಳು ಎಂದಿನಂತೆ ಸೇವೆ ನೀಡುವ ಸಾಧ್ಯತೆಗಳಿವೆ. ಅಲ್ಲದೇ ಮೆಟ್ರೋ ಸೇರಿದಂತೆ ರೈಲು ಸೇವೆಗಳು ಲಭ್ಯವಾಗಲಿವೆ.
ಕಾರ್ಮಿಕ ಸಂಘಟನೆಗಳ ಬೇಡಿಕೆಗಳೇನು..?
- ಮೋಟಾರು ವಾಹನ 2017 ಮಸೂದೆ ಮಂಡನೆಗೆ ವಿರೋಧ.
- ಕಾರ್ಪೋರೆಟ್ ಕಂಪನಿಗಳ ಪರ ಕಾರ್ಮಿಕರ ಕಾನೂನು ತಿದ್ದುಪಡಿಗೆ ತೀವ್ರ ವಿರೋಧ.
- ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಒತ್ತಾಯ.
- ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು 6 ಸಾವಿರ ಮಾಸಿಕ ವೇತನ.
- 18 ಸಾವಿರ ಕನಿಷ್ಟ ವೇತನಕ್ಕೆ ಆಗ್ರಹ.
- ಖಾಸಗಿಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
Copyright: google.com