ಬೆಂಗಳೂರು (25 ಮೇ): ರಾಜ್ಯದಲ್ಲಿ ಎಂದಿನಂತೆಯೇ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 93 ಜನರಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 2182 ಜನ ಸೋಂಕಿಗೆ ಒಳಗಾದಂತಾಗಿದೆ.
ಇಂದು ಅತಿಹೆಚ್ಚು ಅಂದರೆ 32 ಪ್ರಕರಣಗಳು ಉಡುಪಿಯಲ್ಲಿ ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕಲಬುರಗಿ 16 ಮತ್ತು ಯಾದಗಿರಿಯಲ್ಲಿ 15 ಸೊಂಕು ಪ್ರಕರಣ ದಾಖಲಾಗಿದೆ. ಇಂದು ಬೆಳಕಿಗೆ ಬಂದ ಪ್ರಕರಣಗಳಲ್ಲಿ 3 ಜನ ಅಂತಾರಾಷ್ಟ್ರೀಯ ಹಿನ್ನೆಲೆಯನ್ನು ಹೊಂದಿದ್ದರೆ, 73 ಜನರು ಅಂತರಾಜ್ಯ ಪ್ರಯಾಣವನ್ನು ಕೈಗೊಂಡವರಾಗಿದ್ದಾರೆ.
ಇಂದು ದಾಖಲಾದ ಸೋಂಕಿತರ ಜಿಲ್ಲಾವಾರು ಸಂಖ್ಯೆಗಳನ್ನು ನೋಡುತ್ತಾರೆ ಹೋಗುವುದಾದರೆ, ಅತಿ ಹೆಚ್ಚು ಉಡುಪಿ 32, ನಂತರ ಕಲಬುರಗಿ 16, ಯಾದಗಿರಿ 15, ಬೆಂಗಳೂರು 8, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಮಂಡ್ಯ 2, ಕೋಲಾರ 2, ಬೆಳಗಾವಿ 1, ತುಮಕೂರು 1, ಹಾಸನ 1, ರಾಮನಗರ 1, ವಿಜಯಪುರ 1, ಉತ್ತರ ಕನ್ನಡ 1.
ಕೋವಿಡ್19: 25 ಮೇ 2020 ರ ಸಂಜೆಯವರೆಗಿನ ಮಾಹಿತಿ
— CM of Karnataka (@CMofKarnataka) May 25, 2020
ಒಟ್ಟು ಪ್ರಕರಣಗಳು: 2182
ಮೃತಪಟ್ಟವರು: 44
ಗುಣಮುಖರಾದವರು: 705
ಹೊಸ ಪ್ರಕರಣಗಳು: 93
1/3 pic.twitter.com/d28cdu18TA
ಇನ್ನು ಇಲ್ಲಿಯವರೆಗೆ ದಾಖಲಾದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಟಾಪ್ ಐದು ಜಿಲ್ಲೆಗಳು ಯಾವವು ಎಂದು ನೋಡುವುದಾದರೆ ಮೊದಲ ಸ್ಥಾನದಲ್ಲಿ ಬೆಂಗಳೂರು 274 ಸೋಂಕಿತರು, ಎರಡೆನೇ ಸ್ಥಾನದಲ್ಲಿ ಮಂಡ್ಯ 254 ಸೋಂಕಿತರು, ಮೂರನೇ ಸ್ಥಾನ ಕಲಬುರಗಿ 157 ಸೋಂಕಿತರು, ನಾಲ್ಕನೇ ಸ್ಥಾನ ಬೆಳಗಾವಿ 128 ಸೋಂಕಿತರು, ಇನ್ನು ಐದನೇ ಸ್ಥಾನ ಚಿಕ್ಕಬಳ್ಳಾಪುರ126 ಸೋಂಕಿತರತರನ್ನು ಹೊಂದಿವೆ.