ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಟಾಲಿವುಡ್ ನಟ ಕತ್ತಿ ಮಹೇಶ್ ಸ್ಥಿತಿ ಗಂಭೀರ

tollywood-actor-kathi-mahesh-health-condition-very-critical-after-car-accident

ರಸ್ತೆ ಅಪಘಾತವೊಂದರಲ್ಲಿ ಟಾಲಿವುಡ್ ನಟ ಕತ್ತಿ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆ, ಕಣ್ಣು ಮತ್ತು ಮೂಗಿನಮೇಲೆ ಗಂಭೀರ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇತ್ತೀಚಿಗೆ ಕನ್ನಡದ ನಟ ಸಂಚಾರಿ ವಿಜಯ್ ಅಪಘಾತವೊಂದರಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಈ ಘಟನೆ ಮಾಸುವ ಮುನ್ನವೇ ನಟ ಕತ್ತಿ ಮಹೇಶ್ಅಪಘಾತಕ್ಕೆ ಒಳಗಾಗಿದ್ದಾರೆ. ಕತ್ತಿ ಮಹೇಶ್ ಅವರು ಆಂಧ್ರಪ್ರದೇಶದ ಚಿತ್ತೂರಿನಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ವೇಳೆ ಕಾರು ಲಾರಿಗೆ ಡಿಕ್ಕಿಯಾಗಿದೆ.

tollywood-actor-kathi-mahesh-health-condition-very-critical-after-car-accident

ಕತ್ತಿ ಮಹೇಶ್ ತಲೆ ಮತ್ತು ಕಣ್ಣಿನ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಉಸಿರಾಡಲು ತೊಂದರೆಯಿಂದ ಬಳಲುತ್ತಿದ್ದರು, ಅವರನ್ನು ವೆಂಟಿಲೇಟರ್‌ ಗೆ ಶಿಫ್ಟ್ ಮಾಡಲಾಯಿತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಅವರನ್ನು ಚೆನ್ನೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here