tokyo-olympics-ioa-announces-cash-reward-for-coaches

ಮಣಿಪುರ: ಜಪಾನಿನಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ 2020 ರಲ್ಲಿ ವೇಟ್ ಲಿಪ್ಟರ್ ಮೀರಾಬಾಯಿ ಚಾನು ಅವರು ಮೊದಲ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ಮಣಿಪುರ ಸರಕಾರ 1 ಕೋಟಿ ಬಹುಮಾನ ಘೋಷಣೆ ಮಾಡಿದೆ. 

ಮಣಿಪುರ ಮೂಲದ ಮೀರಾಬಾಯಿ ಚಾನು ಅವರು ಇಂದು 49 ಕೆಜಿ ವಿಭಾಗದಲ್ಲಿ 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಅವರ ಈ ಗೆಲುವಿಗೆ ಇಡೀ ಭಾರತವೇ ಸಂಭ್ರಮಿಸಿದೆ. ಈ ನಡುವೆ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾ ಬಾಯಿ ಅವರಿಗೆ ಮಣಿಪುರ ಸರಕಾರ 1 ಕೋಟಿ ಬಹುಮಾನ ನೀಡುವುದಾಗಿ ಘೋಷಣೆಯನ್ನು ಮಾಡಿದೆ. 

ಕ್ರೀಡಾಪಟುಗಳ ಗೆಲುವಿನ ಹಿಂದೆ ಹಲವು ದಿನಗಳ ಶ್ರಮವಿರುತ್ತದೆ. ಈ ಸ್ಥಾನಕ್ಕೆ ಬರಲು ಅವರನ್ನು ತರಬೇತಿ ಮಾಡಿದವರು ಇರುತ್ತಾರೆ. ಈ ಕಾರಣದಿಂದಾಗಿ ಒಲಂಪಿಕ್ ನಲ್ಲಿ ಗೆಲುವು ಸಾಧಿಸಿದ ಕೀಡಾಪಟುಗಳಿಗೆ ಮಾತ್ರವಲ್ಲದೆ ಅವರ ಕೋಚ್ ಗಳಿಗೂ ಬಹುಮಾನ ನೀಡಲು ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿರ್ಧರಿಸಿದೆ. ಈ ಮೂಲಕ ಚಿನ್ನದ ಪದಕ ಗೆದ್ದ ವಿಜೇತರ ಕೋಚ್ ಗಳಿಗೆ 12.50 ಲಕ್ಷ, ಬೆಳ್ಳಿ ಪದಕಕ್ಕೆ 10 ಲಕ್ಷ ಮತ್ತು ಕಂಚಿನ ಪದಕವನ್ನು ಗೆದ್ದವರ ಕೋಚ್ ಗಳಿಗೆ 7.50 ಲಕ್ಷ ರೂಪಾಯಿಗಳನ್ನು ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. 

LEAVE A REPLY

Please enter your comment!
Please enter your name here