tokyo-olympics-indian-shuttler-pv-sindhu-beats-hong-kongs-ngan-yi-cheung-in-women-singles-group-stage

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ತಂಡ ಬುಧವಾರ ಶುಭಾರಂಭ ಮಾಡಿದ್ದು, ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಅವರಿಗೆ ಭರ್ಜರಿ ಜಯ ದೊರೆತಿದೆ.

ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ನಿರೀಕ್ಷೆ ಮೂಡಿಸಿದಷ್ಟು ಪದಕಗಳನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ವೇಟ್ ಲಿಪ್ಟರ್ ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಅದಾದ ಬಳಿಕ ಯಾವುದೇ ಪದಕ ಗೆಲ್ಲುವಲ್ಲಿ ಭಾರತೀಯರು ಅಸಮರ್ಥರಾಗಿದ್ದಾರೆ. ಆದರೆ ಮಹಿಳೆಯರ ಸಿಂಗಲ್ಸ್ ವಿಭಾಗದ ಬ್ಯಾಟ್ಮಿಂಟನ್ ತಾರೆ ಪಿವಿ ಸಿಂಧು ಅವರು ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದ್ದಾರೆ.

ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತದ ಪಿವಿ ಸಿಂಧು ಅವರು ಹಾಂಕಾಂಗ್ ಗಾಂನ್ ಯಿ ಚೇಯುಂಗ್ ವಿರುದ್ಧ ಮೊದಲ ಸೆಟ್ ನಲ್ಲಿ ಭರ್ಜರಿ ಜಯಗಳಿಸಿದರು. ಪಿವಿ ಸಿಂಧು ಅವರು 21-9, 21-16 ನೇರ ಸೆಟ್ ಗಳಲ್ಲಿ ತೀವ್ರ ಆಕ್ರಮಣಕಾರಿಯಾಗಿ ಆಟವಾಡಿ ಜಯಗಳಿಸುವಲ್ಲಿ ಸಫಲರಾದರು.

ಈ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಹಾಂಕಾಂಗ್ ಗಾಂನ್ ಯಿ ಚೇಯುಂಗ್ ಅವರನ್ನು ಹಿಂದಿಕ್ಕಿ ಮುಂದಿನ ಸುತ್ತಿಗೆ ಪಿವಿ ಸಿಂಧು ಅವರು ಆಯ್ಕೆಯಾಗಿದ್ದಾರೆ. ಇದೆ ರೀತಿ ಗೆಲುವನ್ನು ಸಾಧಿಸಿ ಪದಕ ಗೆಲ್ಲುವ ಸುತ್ತಿಗೆ ಆಯ್ಕೆಯಾಗಲಿ, ಅಲ್ಲದೇ ಭಾರತಕ್ಕೆ ಮತ್ತೊಂದು ಪದಕ ತರಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.

LEAVE A REPLY

Please enter your comment!
Please enter your name here