tokyo-olympics-foreign-athlete-eight-others-test-positive-for-covid-19

ಟೋಕಿಯೋ: ಜಪಾನ್ ನಲ್ಲಿ ನಡೆಯುತ್ತಿರುವ ಒಲಂಪಿಕ್ ( Tokyo Olympics 2021 ) ಕ್ರೀಡಾಕೂಟಕ್ಕೆ ಕೊರೋನಾ ಕಾಟ ಶುರುವಾಗಿದೆ. ಇದೀಗ ಓರ್ವ ಅಥ್ಲೀಟ್ ಮತ್ತು ಇತರ 8 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಮಾರಕ ಕೊರೋನಾ ಕಾಟದಿಂದ 2020 ರಲ್ಲಿ ನಡೆಯಬೇಕಿದ್ದ ಒಲಂಪಿಕ್ ಪಂದ್ಯಾವಳಿ ಮುಂದೂಡಲ್ಪಟ್ಟಿತ್ತು, ಈ ಬಾರಿ ಕ್ರೀಡಾಕೂಟ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಆರಂಭಕ್ಕೂ ಮೊದಲೇ ಕೊರೋನಾ ಕಾಟ ಶುರುವಾಗಿದೆ. ಇದೀಗ ಚೆಕ್ ಗಣರಾಜ್ಯದ ವಾಲಿಬಾಲ್ ಆಟಗಾರನಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಇದರೊಂದಿಗೆ ಚೆಕ್ ಗಣರಾಜ್ಯದ ಇಬ್ಬರು ಆಟಗಾರರಿಗೆ ಸೋಂಕು ತಗುಲಿದಂತಾಗಿದೆ.

ಆಟಗಾರರು ಮಾತ್ರವಲ್ಲದೇ ಸಿಬ್ಬಂದಿಗಳೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕ್ರೀಡಾ ಗ್ರಾಮದಲ್ಲಿ ತಂಗಿದ್ದ 8 ಸಿಬ್ಬಂದಿಗೆ ಸೋಂಕು ಇರುವುದು ಗೊತ್ತಾಗಿದ್ದು, ಆತಂಕ ಹೆಚ್ಚು ಮಾಡಿದೆ. ಸೋಂಕಿತರು ಮತ್ತು ಅವರ ಸಂಪರ್ಕಿತರನ್ನು ಐಸೋಲೇಟ್ ಮಾಡಲಾಗಿದ್ದು, ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತಿದೆ.

LEAVE A REPLY

Please enter your comment!
Please enter your name here