tokyo-olympics-2020-mirabai-chanu-wins-silver

ಟೋಕಿಯೋ: ಜಪಾನ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್ ಲಿಪ್ಟರ್ ಮೀರಾಬಾಯಿ ಚಾನು ಅವರು 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಮೀರಾಬಾಯಿ ಚಾನು ಅವರು 49 ಕೆಜಿ ವಿಭಾಗದ ಪಂದ್ಯಾವಳಿಯಲ್ಲಿ 4 ಪ್ರಯತ್ನದಲ್ಲಿ ಒಟ್ಟೂ 202 ಕೆಜಿ ಭಾರ ಎತ್ತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನು ಈ ವಿಭಾಗದಲ್ಲಿ ಪ್ರತಿಸ್ಪರ್ದೆಯೊಡ್ಡಿದ್ದ ಚೀನಾದ ಝೆಹೂಯಿ ಹೌ ಗೆಲುವು ಸಾದಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಝೆಹೂಯಿ ಹೌ ಅವರು 210 ಕೆಜಿ ಭಾರ ಎತ್ತುವ ಮೂಲಕ ತಮ್ಮ ಈ ಸಾಧನೆಯನ್ನು ಮಾಡಿದ್ದಾರೆ. ಇನ್ನು ಈ ವಿಭಾಗದಲ್ಲಿ ಇಂಡೋನೇಷ್ಯಾ ದ ಕಾಂತಿಕಾ ಐಶಾ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಪದಕ ಗೆದ್ದ ಬಳಿಕ ಮಾತನಾಡಿ, ನಾನು ಪದಕ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇಡೀ ದೇಶ ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡು ನೋಡುತ್ತಿತ್ತು. ನಾನು ಸ್ವಲ್ಪ ಹೆದರಿದ್ದೆ, ಆದರೆ ಉತ್ತಮ ಪ್ರದರ್ಶನ ತೋರಿದೆ. ಒಲಂಪಿಕ್ ಕ್ರೀಡೆಯಲ್ಲಿ ಪದಕ ಗೆಲ್ಲುವ ಸಲುವಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೆ. ಅದು ಇಂದು ಸಾರ್ಥಕವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ವೇಟ್ ಲಿಪ್ಟರ್ ಮೀರಾಬಾಯಿ ಚಾನು ಅವರಿಗೆ 1 ಕೋಟಿ ಬಹುಮಾನ ಘೋಷಣೆ

LEAVE A REPLY

Please enter your comment!
Please enter your name here