ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3979 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28,23,444 ಕ್ಕೆ ಏರಿಕೆಯಾಗಿದೆ. ಇಂದು 9,768 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ 969 ಹೊಸ ಪ್ರಕರಣ ಪತ್ತೆಯಾಗಿದ್ದು, 3,176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಇಂದು 14 ಮಂದಿ ಸಾವನ್ನಪ್ಪಿದ್ದಾರೆ.
ಸೋಂಕಿನಿಂದ ರಾಜ್ಯದಲ್ಲಿಂದು 138 ಮಂದಿ ಸಾವನ್ನಪ್ಪಿದ್ದು, ಒಟ್ಟಾರೇ ಮೃತರ ಸಂಖ್ಯೆ 3,4425 ಕ್ಕೆ ಏರಿಕೆಯಾದಂತಾಗಿದೆ. ರಾಜ್ಯದಲ್ಲಿ ಸದ್ಯ 1,10,523 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೋಂಕಿತರ ಮಾಹಿತಿ:
ಬಾಗಲಕೋಟೆ 7, ಬಳ್ಳಾರಿ 67, ಬೆಳಗಾವಿ 98,ಬೆಂಗಳೂರು ಗ್ರಾಮಾಂತರ 81, ಬೆಂಗಳೂರು ನಗರ 969, ಬೀದರ್ 18, ಚಾಮರಾಜನಗರ 64, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 110, ಚಿತ್ರದುರ್ಗ 33, ದಕ್ಷಿಣ ಕನ್ನಡ 498, ದಾವಣಗೆರೆ 118, ಧಾರವಾಡ 62, ಗದಗ 18, ಹಾಸನ 336, ಹಾವೇರಿ 28, ಕಲಬುರಗಿ 31, ಕೊಡಗು 115, ಕೋಲಾರ 103, ಕೊಪ್ಪಳ 18, ಮಂಡ್ಯ 137, ಮೈಸೂರು 404, ರಾಯಚೂರು 16, ರಾಮನಗರ 32, ಶಿವಮೊಗ್ಗ 206, ತುಮಕೂರು 128, ಉಡುಪಿ 123, ಉತ್ತರ ಕನ್ನಡ 104, ವಿಜಯಪುರ 4, ಯಾದಗಿರಿ 7 ಹೊಸ ಪ್ರಕರಣಗಳು ದಾಖಲಾಗಿವೆ.
ಇಂದಿನ 24/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/njaOSfVYi7
@CMofKarnataka @drashwathcn@GovindKarjol @LaxmanSavadi @mla_sudhakar @BBMPCOMM @DC_Dharwad @DCKodagu @dcudupi @DCDK9 @mysurucitycorp @mangalurucorp @CEOUdupi pic.twitter.com/zrOh0OSl6r
— K’taka Health Dept (@DHFWKA) June 24, 2021