ನವದೆಹಲಿ: ನಾವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಆದರೆ ಇದರ ಅರ್ಥ ಭಯೋತ್ಪಾದನೆಯನ್ನು ಕ್ಷಮಿಸುತ್ತೇವೆ ಎಂದಲ್ಲ. ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವುದೇ ರಾಷ್ಟ್ರ ನೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ.
ಸೈಪ್ರಸ್ ಗೆ ಭೇಟಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾತನಾಡುತ್ತ, ನಾವು ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ಹಾಗೆಂದು ನಾವು ಯಾವುದೇ ಭಯೋತ್ಪಾದನಾ ಚಟುವಟಿಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿರಿ: ಭೀಕರ ರಸ್ತೆ ಅಪಘಾತದಲ್ಲಿ ಕ್ರಿಕೆಟರ್ ರಿಷಬ್ ಪಂತ್ ಗೆ ಗಾಯ, ಪರಿಸ್ಥಿತಿ ಗಂಭೀರ
ಚೈನಾದೊಂದಿಗಿನ ಗಡಿ ವಿವಾದದ ಕುರಿತು ಮಾತನಾಡುತ್ತ, ಚೀನಾದೊಂದಿಗಿನ ನಮ್ಮ ಸಂಬಂಧ ಸಾಮಾನ್ಯವಾಗಿಲ್ಲ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟಾರ್ ನಲ್ಲಿ ಚೀನಾ ಮತ್ತು ಭಾರತೀಯ ಸೈನಿಕರು ಘರ್ಷಣೆ ನಡೆಸಿದ ನಂತರ ನಮಗೆ ಗಡಿಯಲ್ಲಿ ಅನೇಕ ಸವಾಲುಗಳು ಎದುರಾಗಿವೆ. ಚೀನಾದ ಇಂತಹ ಅತಿಕ್ರಮ ಪ್ರವೇಶ ಕೋವಿಡ್ ಸಮಯದಿಂದ ಹೆಚ್ಚಾಗಿದೆ ಎಂದು ಹೇಳಿದರು.
ಎಲ್ಎಸಿ ಪ್ರದೇಶವನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಮೂಲಕ ಪಾಕಿಸ್ತಾನ ಮತ್ತು ಚೈನಾ ದೇಶಗಳಿಗೆ ತಿರುಗೇಟನ್ನು ಎಸ್. ಜೈಶಂಕರ್ ನೀಡಿದ್ದಾರೆ.
ಇದನ್ನೂ ಓದಿರಿ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಪಂಚಭೂತಗಳಲ್ಲಿ ಲೀನ