ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಆ ಒಂದು ಘಟನೆ ನಡೆದೇ ಹೋಯಿತು..!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರವಾಹಿ ಅಗ್ನಿಸಾಕ್ಷಿ ಬಹು ಜನತೆಯ ಮನಸ್ಸನ್ನು ಗೆದ್ದಿದೆ. ಹಲವು ವರ್ಷಗಳಿಂದ ಸಾಗಿಬಂದಿರುವ ಈ ಧಾರವಾಹಿ ಈಗ ಸಧ್ಯದಲ್ಲಿ ವೇಗವಾಗಿ ಕಥೆಯು ಸಾಗುತ್ತಿದೆ.ಆದರೆ ಇಂದಿನ ಸಂಚಿಕೆಯಲ್ಲಿ ವಿಶೇಷವೊಂದು ನಡೆದಿದ್ದು, ಈ ಮೂಲಕ ಕಥೆಗೆ ಭಾರಿ ತಿರುವನ್ನು ನೀಡಿದ್ದಾರೆ. ಅದೇನೆಂದು ತಿಳಿಯಲು ಕೆಳಗೆ ನೋಡಿ…
ಒಂದು ಕಾಲದಲ್ಲಿ ಟಾಪ್ ಒಂದನೇ ಸ್ಥಾನದಲ್ಲಿದ್ದ ಈ ಧಾರವಾಹಿ ಕೆಲದಿನ ನೋಡುಗರನ್ನು ಬೇಸರಕ್ಕೆ ಎಡೆಮಾಡಿತ್ತು. ಆದರೆ ಮತ್ತೆ ಕೆಲವು ದಿನಗಳಿಂದ ವೀಕ್ಷಕರನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ತನ್ನತ್ತ ಸೆಳೆಯುತ್ತಿದೆ. ಆದರೆ  ಇಂದಿನ ಕಥೆಯಲ್ಲಿ ಆಯುಶಿಯಾಗಿ ಸಿದ್ದಾರ್ಥ ಮನೆಯಲ್ಲಿರುವ ಖುಷಿ ಮಾತನಾಡಿದ್ದು, ಮನೆಯಲ್ಲಿ ಸಂಚಲನವನ್ನೇ ಮಾಡಿದ್ದಾಳೆ. ಇದರ ಜೊತೆಗೆ ಖುಷಿಯಾಗಿ ತಾಯಿಯ ಜೊತೆಯಿರುವ ಆಯುಷಿ ಅಖಿಲ್, ಸಿದ್ದಾರ್ಥ ಮತ್ತು ಗೌತಮ್ ಸಹೋದರರು, ಅಲ್ಲದೆ ತಾನು ಖುಷಿ ಅಲ್ಲ ಆಯುಷಿ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಈ ತಿರುವು ಬೇಸರ ಮೂಡಿಸಿದ್ದ  ಅಗ್ನಿಸಾಕ್ಷಿ ವೀಕ್ಷಕರಿಗೆ ಕುತೂಹಲ ಮೂಡಿಸಿದೆ. ಈ ಮೂಲಕ ಅತಿ ಹೆಚ್ಚು ವೀಕ್ಷಕರನ್ನು ಮತ್ತೊಮ್ಮೆ ತನ್ನತ್ತ ಸೆಳೆದುಕೊಳ್ಳುತ್ತಿದೆ.

 

LEAVE A REPLY

Please enter your comment!
Please enter your name here