terrorists-attack-on-border-security-force

ಗಡಿ ಭದ್ರತಾ ಪಡೆಯ ಮೇಲೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ  ಭಯೋತ್ಪಾದಕ ದಾಳಿಯನ್ನು ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಯೋಧರಿಗೆ ಗಂಭೀರ ಗಾಯಗಳಾಗಿ, ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶ್ರೀನಗರದ ನವಕಾಡಲ್ ಎಂಬ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಹುರಿಯತ್ ಪ್ರತ್ಯೇಕತಾವಾದಿ ಗುಂಪಿನ ಅಧ್ಯಕ್ಷನಾದ ಅಶ್ರಫ್ ಖಾನ್ ನ ಮಗನಾದ ಜುನೈದ್ ಖಾನ್ ಮತ್ತು ಪುಲ್ವಾಮಾ ದಾಳಿಯ ಎರಡನೆಯ ಆರೋಪಿ ಅಹಮದ್ ಶೇಕ್ ಎನ್ನುವವರನ್ನು ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳ ಮೂಲಕ ಹಲವಾರು ಭಯೋತ್ಪಾದಕರು ಒಳನುಸುಳಿದ್ದು, ಈ ಸಂಬಂಧ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಭಯೋತ್ಪಾದಕರು ದಾಳಿ ನಡೆಸಿದ್ದು, ಇಬ್ಬರು ಬಿ.ಎಸ್.ಎಫ್. ಯೋಧರು ಬಲಿಯಾಗಿದ್ದು ಬೇಸರ ಸಂಗತಿಯಾಗಿದೆ.

300 ಕ್ಕೂ ಹೆಚ್ಚು ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ

ಜಮ್ಮು ಮತ್ತು ಕಾಶ್ಮೀರದ ಪೋಲಿಸ್ ಮಹಾನಿರ್ದೇಶಕ ದಿಬ್ಗಾಲ್ ಸಿಂಗ್ 300 ಕ್ಕೂ ಹೆಚ್ಚು ಭಯೋತ್ಪಾದಕರು ಒಳನುಸುಳಲು ಪಿಓಕೆ ಪ್ರದೇಶದಲ್ಲಿ ಜಮಾಯಿಸಿದ್ದಾರೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಒಳಗೆ ನುಸುಲಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನದ ಪ್ರಯತ್ನವನ್ನು ತಡೆಯಲು ಭದ್ರತಾ ಪಡೆಗಳು ಜಾಗರೂಕತೆಯನ್ನು ವಹಿಸಿದ್ದಾರೆ.  ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳ ಸುತ್ತ ಮುತ್ತ ನಾಲ್ಕು ಆಕ್ರಮಣಗಳು ನಡೆದಿವೆ. ಅಡಗುತಾಣಗಳಲ್ಲಿ ತರಬೇತಿಯನ್ನು ಪಡೆದ ಭಯೋತ್ಪಾದಕರು ಒಳನುಸುಳಲು ಸಿದ್ದರಾಗಿದ್ದು, ಇವರಿಗೆ ಪಾಕಿಸ್ತಾನದ ಐ.ಎಸ್.ಐ, ಸೇನೆ ಮತ್ತು ಇತರ ಏಜನ್ಸಿಗಳು ಸಹಾಯವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಲಾಕ್‌ಡೌನ್ ಮಧ್ಯೆ ಕೇಂದ್ರ ಸರ್ಕಾರದ ಪ್ರಕಟಣೆ – ದೇಶೀಯ ವಿಮಾನ ಸೇವೆ ಮೇ 25 ರಿಂದ ಪ್ರಾರಂಭ

LEAVE A REPLY

Please enter your comment!
Please enter your name here