ಅಕ್ರಮ ಆಸ್ತಿಯಗಳಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ತಮಿಳುನಾಡಿನ ಶಶಿಕಲಾ ಅವರು ಶೀಘ್ರದಲ್ಲಯೇ ಬಿಡುಗಡೆಯಾಗಲಿದ್ದಾರೆ ಎಂದು ಅವರ ವಕೀಲ ಎನ್ ರಾಜಾ ಹೇಳಿದ್ದಾರೆ.
ತಮಿಳುನಾಡಿನ ಜಯಲಲಿತಾ ಆಪ್ತೆ ಶಶಿಕಲಾ ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಶಿಕ್ಷೆಗೆ ಗುರಿಯಾಗಿದ್ದರು. ಅವರ ಉತ್ತಮ ನಡವಳಿಕೆಗಳಿಂದ ಸನ್ನಡತೆಯ ಆದಾರದ ಮೇಲೆ ಪ್ರತಿ ತಿಂಗಳು ಮೂರು ದಿನಗಳ ಶಿಕ್ಷೆ ಇಳಿಕೆಯಾಗುತ್ತದೆ.
ಅವರು ಇಲ್ಲಿಯವರೆಗೆ 43 ತಿಂಗಳುಗಳ ಕಾಲ ಶಿಕ್ಷೆಯನ್ನು ಅನುಭವಿಸಿದ್ದಾರೆ. ಅಂದರೆ ಇಲ್ಲಿಯವರೆಗೆ 129 ದಿನಗಳ ಶಿಕ್ಷೆ ಇಳಿಕೆಗೆ ಅವರು ಅರ್ಹರಾಗಿದ್ದಾರೆ. ಹಾಗಾಗಿ ಕೆಲವೇ ದಿನಗಳಲ್ಲಿ ಅವರ ಶಿಕ್ಷೆಯ ಅವಧಿ ಮುಗಿಯಲಿದ್ದು, ಶೀಗ್ರವೇ ಹೊರಬರಲಿದ್ದಾರೆ ಎಂದು ಚೆನ್ನೈ ನಲ್ಲಿ ಮಾತನಾಡುತ್ತ ವಕೀಲರು ಹೇಳಿದ್ದಾರೆ.