ವಿಜಯದಶಮಿಯ ದಿನ ಫ್ರಾನ್ಸ್ ಸರಕಾರ ಮೊದಲ ರಫೇಲ್ ಯುದ್ಧ ವಿಮಾನವನ್ನು ರಾಜನಾಥ ಸಿಂಗ್ ಅವರಿಗೆ ಹಸ್ತಾಂತರಿಸಿತು. ಆಯುಧ ಪೂಜೆಯ ದಿನವಾದ್ದರಿಂದ ಹಸ್ತಾಂತರದ ನಂತರ ರಕ್ಷಣಾ ಸಚಿವರು ವಿಮಾನಕ್ಕೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಸಲ್ಲಿಸಿದರು.
ಈಗ ವಿಮಾನಕ್ಕೆ ಪೂಜೆಯನ್ನು ಸಲ್ಲಿಸಿದ್ದು ಕಾಂಗ್ರೆಸ್ ನ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಂತೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಬೋಪೋರ್ಸ್ ನಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಅವುಗಳನ್ನು ತರಲು ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುಲು ಯಾರೂ ಹೋಗಿರಲಿಲ್ಲ. ಆದರೆ ರಾಜನಾಥ ಸಿಂಗ್ ಅವರು ವಿಮಾನಕ್ಕೆ ಪೂಜೆ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುಲು ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..!
