ಪ್ರಧಾನಿ ಮೋದಿ ಎಂದರೇ ಹಾಗೆ…ತುಂಬಾ ಕ್ರಿಯಾಶೀಲ ವ್ಯಕ್ತಿ … ವಿರೋದ ಪಕ್ಷಗಳು ಹೇಳುವಂತೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತಿರುಗುತ್ತಾರೆ. ಆದರೆ ಯಾವುದೇ ಸುಖ ಅಥವಾ ಸ್ವ ಲಾಭಕ್ಕಾಗಿ ಅಲ್ಲ. ಬದಲಾಗಿ ದೇಶದ ಕಾರ್ಯಕ್ಕಾಗಿ ತಿರುಗಿದರೂ ಎಲ್ಲಿಯೂ ಸಮಯ ವ್ಯರ್ಥ ಮಾಡದೇ ತನ್ನ ಕಾರ್ಯವನ್ನು ಸಾಧಿಸಿಯೇ ಹಿಂದಿರುಗುತ್ತಾರೆ. ಕಳೆದ ಎರಡು ದಿನಗಳಿಂದ ಜಪಾನ್ ಪ್ರವಾಸದಲ್ಲಿದ್ದ ಮೋದಿಯವರು ಅಲ್ಲಿನ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಅನೇಕ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡು ತಕ್ಷಣ ಸಮಯ ವ್ಯರ್ಥ ಮಾಡದೇ ಭಾರತಕ್ಕೆ ಮರಳಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಇಟಲಿಯ ಪ್ರಧಾನಿ ಮಿ. ಜಿಸಪ್ಪೆ ಕಾಂಟೆ ಅವರನ್ನು ಸ್ವಾಗತಿಸಿ, ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ. ಇಟಲಿ ಪ್ರಧಾನಿ ಭಾರತ-ಇಟಲಿ ತಾಂತ್ರಿಕ ಶೃಂಗ ಸಭೆಯ ಕಾರಣಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಮಾಹಿತಿ ಹಾಗು ಸಂಪರ್ಕ ಕುರಿತಂತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ : ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಲೋಕಾರ್ಪಣೆ: ಈ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳು..
ಇಟಲಿಯು ಭಾರತ ಐದನೆಯ ಅತಿದೊಡ್ಡ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವ ದೇಶವಾಗಿದ್ದು, ಎರಡೂ ದೇಶಗಳು ವ್ಯಾಪಾರ ನಡೆಸಿರುವ ಮೊತ್ತ 2017 – 18 ರಲ್ಲಿ ಸುಮಾರು 10 . 4 ಬಿಲಿಯನ್ ಡಾಲರ್ ನಷ್ಟಿದೆ. ಸುಮಾರು 600 ಇಟಲಿ ದೇಶದ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.