ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಪಡೆ: ಭಾರತಕ್ಕೆ ಇಂದು ಹರಿಣಗಳ ಸವಾಲು

t20-world-cup-2022-india-vs-south-africa-match

ಪರ್ತ್: ಟಿ-20 ವಿಶ್ವಕಪ್ ಪಂದ್ಯಾವಳಿಯ ಸೂಪರ್-12 ರ ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮ ವಿಶ್ವಾಸದಲ್ಲಿರುವ ಭಾರತ ತಂಡ ಇಂದು ಭಾನುವಾರ ನಡೆಯಲಿರುವ ತನ್ನ ಮೂರನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಗ್ರೂಪ್-2 ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಪಡೆ ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿ ಮುಂದುವರೆಯುವ ನಿರೀಕ್ಷೆಯಲ್ಲಿದೆ.

ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ರನ್ ಗಳಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯ ಉತ್ತಮ ಪ್ರದರ್ಶನ ಮುಂದುವರೆಯುವ ನಿರೀಕ್ಷೆಯಿದೆ. ಸೂರ್ಯಕುಮಾರ್ ಯಾದವ್ ಅವರ ಉತ್ತಮ ಫಾರ್ಮ್ ತಂಡಕ್ಕೆ ಹೆಚ್ಚಿನ ನೆರವು ನೀಡಲಿದೆ. ವೇಗದ ಬೌಲಿಂಗ್ ಪಿಚ್ ಆಗಿರುವ ಪರ್ತ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾದ ವೇಗಿಗಳಿಂದ ಭಾರತೀಯ ಬ್ಯಾಟರ್ ಗಳಿಗೆ ತೊಂದರೆಯಾಗಬಹುದು. ಭಾರತೀಯ ಬೌಲರ್ಗಳು ಅಬ್ಬರಿಸುತ್ತಿದ್ದಾರೆ ಆದರೂ ಬೌಲಿಂಗ್ ಇನ್ನೂ ಸುಧಾರಿಸಬೇಕಿದೆ.

ದಕ್ಷಿಣ ಆಫ್ರಿಕಾ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ವಿರುದ್ಧ ಗೆಲುವು ಸಾಧಿಸಿ ಮೊದಲ ಸ್ಥಾನಕ್ಕೆ ಬಂದು, ಸೆಮಿ ಫೈನಲ್ ಗೆ ಏರುವ ಅವಕಾಶದ ಕಡೆಗೆ ಗಮನ ಹರಿಸಿದೆ. ನಾಯಕ ಟೆಂಬಾ ಬವುಮಾ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ನಿಂದಾಗಿ ದಕ್ಷಿಣ ಆಫ್ರಿಕಾ ಚಿಂತೆಯಲ್ಲಿದೆ. ರೀಲಿ ರೌಸ್ ಮತ್ತು ಡೇವಿಡ್ ಮಿಲ್ಲರ್ ಮೇಲೆ ಹೆಚ್ಚಿನ ರನ್ ಗಳಿಸುವ ಒತ್ತಡ ಸಹ ಕಂಡುಬರುತ್ತಿದೆ. ಅಲ್ಲದೇ ಇವರಿಬ್ಬರೂ ಭಾರತದ ವಿರುದ್ಧ ಉತ್ತಮ ಆಟವಾಡಿರುವ ಅನುಭವ ಹೊಂದಿದ್ದಾರೆ. ಈ ಬಾರಿಯೂ ಉತ್ತಮ ಪ್ರದರ್ಶನ ಮುಂದುವರೆಸುವ ನಿರೀಕ್ಷೆಯಿದೆ. ಬೌಲಿಂಗ್ ವಿಭಾಗದಲ್ಲಿ ರಬಾಡ, ನೋಕಿಯಾ ಭಾರತದ ಬ್ಯಾಟರ್ ಗಳನ್ನು ಕಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿರಿ: SSLC Exam Time Table: ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಆಕ್ಷೇಪಕ್ಕೆ ಅವಕಾಶ

LEAVE A REPLY

Please enter your comment!
Please enter your name here