swachhta-abhiyaan-in-us-modis-down-to-earth-gesture-at-houston-airport
Image Credit: google.com
ಹ್ಯೂಸ್ಟನ್: ಅಮೇರಿಕದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹ್ಯೂಸ್ಟನ್ ವಿಮಾನನಿಲ್ದಾಣದಲ್ಲಿ ನೆಲದಲ್ಲಿ ಬಿದ್ದ ಹೂವನ್ನು ಎತ್ತುವ ಮೂಲಕ ಸ್ವಚ್ಚತೆಗೆ ಮಹತ್ವ ನೀಡಿದ ಘಟನೆ ನಡೆದಿದೆ.
ಹೌಡಿ ಮೋದಿ‘ ಕಾರ್ಯಕ್ರಮ ಸೇರಿದಂತೆ ವಿಶೇಷ ಪ್ರವಾಸದಲ್ಲಿರುವ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ರಾಯಭಾರಿಗಳು ಮತ್ತು ಅಧಿಕಾರಿಗಳು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಹೂಗುಚ್ಚದಿಂದ ಒಂದು ಹೂವು ನೆಲದಲ್ಲಿ ಬಿದ್ದಿತು. ತಕ್ಷಣ ಅದನ್ನು ಎತ್ತಿ ತಮ್ಮ ಭದ್ರತಾ ಸಿಬ್ಬಂದಿಯ ಕೈಗೆ ನೀಡುವ ಮೂಲಕ ಸ್ವಚ್ಚತೆಯ ಕುರಿತು ತಮ್ಮ ಮಾತು ಮತ್ತು ತಮ್ಮ ನಡತೆಯಲ್ಲಿ ವ್ಯತ್ಯಾಸವಿಲ್ಲ ಎನ್ನುವ ಸಂದೇಶವನ್ನು ನೀಡಿದರು.
ಹೌಡಿ ಮೋದಿ‘ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾರ್ಜ್ ಬುಷ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಈ ಘಟನೆ ಜರುಗಿದ್ದು, ಅವರ ಸರಳ ವ್ಯಕ್ತಿತ್ವವನ್ನು ಎತ್ತಿ ತೋರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here