ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಬಂಗಲೆ ಎದುರಿಗೆ ಸ್ಫೋಟಕ ತುಂಬಿದ ಸ್ಕಾರ್ಪಿಯೋ ನಿಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ತನಿಖಾ ತಂಡ ಅಪರಾಧ ಪ್ರಕರಣದ ಮರುಸೃಷ್ಟಿ ಮಾಡಿದೆ.
ಪ್ರಕರಣದ ತನಿಖೆಯ ಅಂಗವಾಗಿ ಘಟನೆಯ ಮರುಸೃಷ್ಟಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಸಹ ಸ್ಥಳಕ್ಕೆ ಕರೆತರಲಾಗಿತ್ತು. ಶುಕ್ರವಾರ ತಡರಾತ್ರಿತ ನಿಖಾಧಿಕಾರಿಗಳು ಪ್ರಕರಣದ ಮರುಸೃಷ್ಟಿ ಮಾಡಿದ್ದು 30 ನಿಮಿಷಗಳಿಗೂ ಅಧಿಕ ಕಾಲ ಘಟನಾ ಸ್ಥಳದಲ್ಲಿ ತನಿಖೆ ನಡೆಸಿದರು.