ನವದೆಹಲಿ: ಅಂತಾರಾಷ್ಟ್ರೀಯ ಕ್ರೀಕೆಟ್ ಗೆ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ವಿದಾಯ ಹೇಳಿದ ಬೆನ್ನಲ್ಲೇ ಮತ್ತೋರ್ವ ಕ್ರೀಕೆಟಿಗ ಸಹ ಗುಡ್ ಬೈ ಹೇಳಿದ್ದಾರೆ.
2005 ರಲ್ಲಿ ಅಂತಾರಾಷ್ಟ್ರೀಯ ಕ್ರೀಕೆಟ್ ಗೆ ಬಂದಿದ್ದ ಸುರೇಶ್ ರೈನಾ ಅವರು ಇಂದು ಅಂತಾರಾಷ್ಟ್ರೀಯ ಕ್ರೀಕೆಟ್ ಗೆ ವಿದಾಯ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ವಿದಾಯದ ಕುರಿತು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಸುರೇಶ್ ರೈನಾ ಅವರು ತಮ್ಮ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೆ 226 ಏಕದಿನ ಪಂದ್ಯಗಳು, 78 ಟಿ-20 ಪಂದ್ಯಗಳು ಮತ್ತು 19 ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಏಕದಿನ ಪಂದ್ಯದಲ್ಲಿ 5,615 ರನ್ನುಗಳು, 1,605 ಟಿ-20 ಪಂದ್ಯದ ರನ್ನುಗಳು ಮತ್ತು ಟೆಸ್ಟ್ ಪಂದ್ಯಗಳಿಂದ 768 ರನ್ನುಗಳನ್ನು ಕಲೆಹಾಕಿದ್ದಾರೆ.
ಇದನ್ನೂ ಓದಿರಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ