supreme-court-verdict-in-ayodhya-title-suit-tomorrow

ನವದೆಹಲಿ: ಶತಮಾನದ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿಯ ಭೂವಿವಾದಕ್ಕೆ ನಾಳೆ ಸುಪ್ರೀಂಕೋರ್ಟ್ ನಿಂದ ಐತಿಹಾಸಿಕ ತೀರ್ಪು ಹೊರಬೀಳಲಿದೆ. ಈ ಭೂ ವಿವಾದಕ್ಕೆ ಸಂಬಂಧಿಸಿದ 40 ದಿನಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿ ಅಕ್ಟೋಬರ್ 16 ರಂದು ಅಂತ್ಯಗೊಂಡಿತ್ತು.

1992 ರಲ್ಲಿ ಬಾಬರಿ ಮಸೀದಿಯ ದ್ವಂಸ ಪ್ರಕರಣ ನಡೆದ ಸಮಯದಲ್ಲಿ ಈ ವಿವಾದಕ್ಕೆ ಸಂಬಂದಪಟ್ಟ ಒಟ್ಟು 67 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಉಳಿದ ಭೂಮಿಯ ಸಮಸ್ಯೆಗಳು ಬಗೆಹರಿದು ಕೇವಲ 2.7 ಎಕರೆ ಪ್ರದೇಶಗಳು ಮಾತ್ರ ವಿವಾದಿತ ಪ್ರದೇಶವಾಗಿ ಉಳಿದುಕೊಂಡಿತ್ತು. ಈ ವಿವಾದವು ಸದ್ಯ ಸುಪ್ರೀಂ ಅಂಗಳಕ್ಕೆ ತಲುಪಿದ್ದು, ವಿಚಾರಣೆಯನ್ನು ನಡೆಸಿದೆ.

ಇದನ್ನೂ ಓದಿರಿ: ಅಯೋಧ್ಯಾ ತೀರ್ಪು: ಸೋಷಿಯಲ್ ಮೀಡಿಯಾಗಳಲ್ಲಿ ನೀವು ಪಾಲಿಸಲೇಬೇಕಾದ 12 ನಿಯಮಗಳು

ಈ ಪ್ರಕರಣವನ್ನು ಸುಪ್ರೀಂಕೋರ್ಟ್ ನ  ಸಿಜೆಐ ರಂಜನ್ ಗೊಗೋಯ್ ನೇತ್ರತ್ವದ ಐದು ಸದಸ್ಯರ  ಪೀಠವು ವಿಚಾರಣೆ ನಡೆಸಿದ್ದು, ನಾಳೆ ನವೆಂಬರ್ 9 ರಂದು 10.30 ಕ್ಕೆ ತೀರ್ಪು ಪ್ರಕಟಿಸಲಿದೆ.

ಇದನ್ನೂ ಓದಿರಿ: ಅಯೋಧ್ಯೆ ತೀರ್ಪು: ಶಾಂತಿ ಕಾಪಾಡಿ ಎಂದು ಪ್ರಧಾನಿ ಮೋದಿ ಮನವಿ

ಅಯೋಧ್ಯಾ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಸಿಜೆಐ ರಂಜನ್ ಗೊಗೋಯ್ ಅವರು ಉತ್ತರಪ್ರದೇಶದ ಉನ್ನತಾಧಿಕಾರಿಗಳ ಜೊತೆಯಲ್ಲಿ ಭದ್ರತೆಯ ಕುರಿತು ಮಾತುಕತೆ ನಡೆಸಿದ್ದಾರೆ. ಎಲ್ಲರೀತಿಯ ಭರವಸೆ ದೊರೆತನಂತರವೇ ನಾಳೆ ತೀರ್ಪು ನೀಡುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕಾಗಿ ದೇಶದ ಗೃಹ ಇಲಾಖೆಯು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಇಂಟರ್ನೆಟ್ ನಲ್ಲಿ ಕೋಮು ಸೌಹಾರ್ಧತೆ ಕೆಡಿಸುವವರನ್ನು ಮಟ್ಟಹಾಕಲು ಸೈಬರ್ ಕ್ರೈಂ ಪೋಲಿಸರು ಹದ್ದಿನಕಣ್ಣು ಇಟ್ಟಿದ್ದಾರೆ.

ಇದನ್ನೂ ಓದಿರಿ: ದೀಪ ಬೆಳಗುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ ಅಯೋಧ್ಯೆ ನಗರ

LEAVE A REPLY

Please enter your comment!
Please enter your name here