ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ‘ಎರಡು ಬೆರಳಿನ ಪರೀಕ್ಷೆ’ಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪ್ರಕರಣಗಲ್ಲಿ ಎರಡು ಬೆರಳಿನ ಪರೀಕ್ಷೆ ಬಳಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಪರೀಕ್ಷೆಯು ಯಾವುದೇ ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿಲ್ಲ, ಅಲ್ಲದೇ ಈ ಪರೀಕ್ಷೆಯಿಂದ ಸಂತ್ರಸ್ತೆಗೆ ಮತ್ತೂ ಮಾನಸಿಕ ಹಿಂಸೆ ಉಂಟಾಗುತ್ತದೆ. ಆದ್ದರಿಂದ ಈ ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ಪರೀಕ್ಷೆಯನ್ನು ನಡೆಸುವವರನ್ನು ತಪ್ಪಿತಸ್ಥರೆಂದು ಪರಿಗಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಪರೀಕ್ಷೆಯ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಕೂಡಾ ಈ ಟೆಸ್ಟ್ ಅನೈತಿಕ ಎಂದು ಕರೆದಿದೆ. ಅತ್ಯಾಚಾರ ಪ್ರಕರಣದಲ್ಲಿ, ಹೈಮನ್ ತನಿಖೆಯಿಂದ ಎಲ್ಲವೂ ಬಹಿರಂಗವಾಗುವುದಿಲ್ಲ ಎಂದು ಅದು ಹೇಳಿತ್ತು. ಈ ಪರೀಕ್ಷೆಯು ಅನುಮಾನಾಸ್ಪದವಾಗಿದ್ದು, ಟು ಫಿಂಗರ್ ಟೆಸ್ಟ್ ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದು ಹಾಗೂ ಸಂತ್ರಸ್ತೆಗೆ ನೋವನ್ನು ಉಂಟುಮಾಡಬಹುದು. ಇದು ಲೈಂಗಿಕ ದೌರ್ಜನ್ಯಕ್ಕೆ ಸಮವಾಗಿದ್ದು, ಈ ಟೆಸ್ಟ್ ಮೂಲಕ ಸಂತ್ರಸ್ತೆ ಮತ್ತೆ ಅಂತಹುದೇ ನೋವು ಅನುಭವಿಸಬೇಕಾಗುತ್ತದೆ ಎಂದಿತ್ತು.
ಇದನ್ನೂ ಓದಿರಿ:BREAKING NEWS: ಗುಜರಾತ್ ನಲ್ಲಿ ನೂರಾರು ಜನರಿದ್ದ ಕೇಬಲ್ ಸೇತುವೆ ಕುಸಿತ; ರಕ್ಷಣಾ ಕಾರ್ಯ ಚುರುಕು