ನವದೆಹಲಿ: ಇಂದು ವಿವಾದಿತ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿಯ ಪ್ರಕರಣಕ್ಕೆ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ರಂಜನ್ ಗೊಗೋಯ್ ಅವರ ನೇತ್ರತ್ವದ ಪಂಚ ಸದಸ್ಯ ಪೀಠ ಇಂದು ರಾಮಜನ್ಮಭೂಮಿಯ ವಿವಾದಕ್ಕೆ ಅಂತ್ಯ ಹಾಡುವ ಇತಿಹಾಸಿಕ ತೀರ್ಪನ್ನು ನೀಡಿದೆ. ವಿವಾದಿತ 2.77 ಎಕರೆ ಜಮೀನಿನಲ್ಲಿ ಹಿಂದೂಗಳು ರಾಮಮಂದಿರವನ್ನು ನಿರ್ಮಿಸಲು ಅವಕಾಶವನ್ನು ಮಾಡಿಕೊಟ್ಟಿದೆ.
ಅಯೋಧ್ಯಾ ಭೂಮಿಯನ್ನು ರಾಮಲಲ್ಲಾಗೆ ಒಪ್ಪಿಸಬೇಕು, ಕೇಂದ್ರ ಸರಕಾರ ಒಂದು ಟ್ರಸ್ಟನ್ನು ರಚಿಸಿ ಅದರ ಮೇಲುಸ್ತುವಾರಿಕೆಯಲ್ಲಿ ದೇವಾಲಯ ನಿರ್ಮಾಣವಾಗಬೇಕು ಎಂದು ತಿಳಿಸಿದೆ. ಈ ಭೂಮಿಗೆ ಪರ್ಯಾಯವಾಗಿ ಸುನ್ನಿ ವಕ್ಫ್ ಬೋರ್ಡ್ ಗೆ ಮಸೀದಿಯನ್ನು ನಿರ್ಮಿಸಿಕೊಳ್ಳಲು 5 ಎಕರೆ ಜಾಗವನ್ನು ಸರಕಾರ ನೀಡಬೇಕು ಎಂದು ತಿಳಿಸಿದೆ.
ಅಯೋಧ್ಯೆ ತೀರ್ಪಿನ ಗಮನಾರ್ಹ ಅಂಶಗಳು ಯಾವವು ಎಂದು ನೋಡೋಣ
- ಪುರಾತತ್ವ ಇಲಾಖೆಯು ನಡೆಸಿದ ಸಂಶೋದನೆಗಳ ಪ್ರಕಾರ ದ್ವಂಸಗೊಂಡ ಮಸೀದಿಯ ಕೆಳಗೆ, ಮಸೀದಿ ನಿರ್ಮಾಣಕ್ಕೂ ಮುನ್ನ ಇಸ್ಲಾಮಿಕ್ ಶೈಲಿಯಲ್ಲದ ಬೇರೊಂದು ಕಟ್ಟಡವಿತ್ತು.
- ಪುರಾತತ್ವ ಇಲಾಖೆಯ ವರದಿಗಳ ಪ್ರಕಾರ ಮಸೀದಿಯ ಕೆಳಗೆ ದೇವಾಲಯದ ರಚನೆಯಿತ್ತು.
- ಆದರೆ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಯಿತೇ ಎನ್ನುವಕುರಿತು ಯಾವುದೇ ಪುರಾವೆಯನ್ನು ಪುರಾತತ್ವ ಇಲಾಖೆ ನೀಡಿಲ್ಲ.
- ವಿವಾದಿತ ಈ ಭೂಮಿಯನ್ನು ಹಿಂದೂಗಳು ರಾಮನ ಜನ್ಮಸ್ಥಳ ಎಂದು ನಂಬುತ್ತಾರೆ.
- ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತಲೂ ಮುಂಚಿನಿಂದ ಹಿಂದೂಗಳು ಇಲ್ಲಿ ರಾಮನ ಪೂಜೆಯನ್ನು ಮಾಡುತ್ತಾ ಬಂದಿದ್ದಾರೆ.
- ಮಸೀದಿಯ ಹೊರಭಾಗದಲ್ಲಿ ಸೀತಾ ರಸೋಯಿ, ರಾಮ ಚಬೋತರ್ ಮತ್ತು ರಾಮ ಭಂಡಾರ್ ಎಂಬ ಹಿಂದೂ ಧಾರ್ಮಿಕ ಸ್ಥಳಗಳು ಕಂಡುಬರುತ್ತವೆ.
- ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಅಡ್ಡಿಯಾಗಿತ್ತಾದರು, ಪ್ರಾರ್ಥನೆಯನ್ನು ನಿಷೇಧಿಸಿದ ಯಾವುದೇ ಕುರುಹು ಕಂಡುಬಂದಿಲ್ಲಾ.
- ವಿವಾದಿತ ಸ್ಥಳದ ಮೇಲೆ ವಿಶೇಷ ಅಧಿಕಾರ ಹೊಂದಿರುವ ಕುರಿತು ಮುಸ್ಲಿಮರು ಯಾವುದೇ ಆಧಾರ ನೀಡಿಲ್ಲ.
- ಇದಕ್ಕೆ ಪ್ರತಿಯಾಗಿ ವಿವಾದಿತ ಪ್ರದೇಶದ ಹೊರಬಾಗ ತಮ್ಮ ಸ್ವಾದಿನದಲ್ಲಿರುವ ದಾಖಲೆಗಳನ್ನು ನೀಡಿದ್ದಾರೆ.
- ಬಾಬರಿ ಮಸೀದಿಯ ದ್ವಂಸ ಮಾಡಿದ್ದು, ಕಾನೂನು ರೀತಿಯ ಅಪರಾದ.
- ನಿರ್ಮೋಹಿ ಅಖಾರಾ ಶ್ರೀರಾಮನ ಆರಾದಕರಲ್ಲ. ಹಾಗಾಗಿ ಮನವಿಯನ್ನು ವಜಾಗೊಲಿಸುತ್ತೇನೆ.
- ಈ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಬೇಕು. ಇದಕ್ಕೆ ಪ್ರತಿಯಾಗಿ ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಜಾಗವನ್ನು ನೀಡಬೇಕು.
- ದೇವಾಲಯವನ್ನು ನೀರ್ಮಿಸಲು ಕೇಂದ್ರ ಸರಕಾರ ಟ್ರಸ್ಟ್ ಒಂದನ್ನು 3 ತಿಂಗಳೊಳಗೆ ರಚಿಸಿ, ಅವರ ಉಸ್ತುವಾರಿಯಲ್ಲಿ ದೇವಾಲಯ ನಿರ್ಮಾಣವಾಗಬೇಕು.
- ದೇವಾಲಯ ನಿರ್ಮಾಣ ರಾಜ್ಯ ಮತ್ತು ಕೇಂದ್ರದ ನಿಗಾದಲ್ಲಿ ನಡೆಯಬೇಕು ಎಂದು ತಿಳಿಸಿದೆ.
ಇದನ್ನೂ ಓದಿರಿ: ಹಲವು ದಶಕಗಳ ವಿವಾದಕ್ಕೆ ಅಂತ್ಯ: ರಾಮನ ಪಾಲಾದ ಅಯೋಧ್ಯೆ ಭೂಮಿ