ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯಾರ್ದದ 40 ನೇಯ ಪಂದ್ಯ ಇಂದು ಸಂಜೆ 7.30 ಗಂಟೆಗೆ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಲಿದೆ.
ಇಂದು ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕಳಪೆ ಪ್ರದರ್ಶದಿಂದಾಗಿ ಈಗಾಗಲೇ ಪ್ಲೇ ಆಫ್ ನಿಂದ ಬಹುತೇಕ ಹೊರಬಿದ್ದಿರುವ ಹೈದ್ರಾಬಾದ್ ತಂಡ ಇಂದಿನ ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಮೇಲೆ ಬರುವ ತವಕದಲ್ಲಿದೆ. ಇತ್ತ ಫ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿರುವ ರಾಜಸ್ಥಾನ್ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮೇಲಕ್ಕೆ ಏರಿಸಿಕೊಳ್ಳಲು ತವಕಿಸುತ್ತಿದೆ.
ಈ ಕಾರಣಗಳಿಂದಾಗಿ ಇಂದಿನ ಪಂದ್ಯವು ಕುತೂಹಲ ಕೆರಳಿಸಿದ್ದು, ವಿಜಯಮಾಲೆ ಯಾರಕೊರಳಿಗೆ ಬೀಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಭಾರತೀಯ ಕಾಲಮಾನ 7.30 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಐಪಿಎಲ್ ಅಭಿಮಾನಿಗಳು ಪಂದ್ಯ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.