sunday-lockdown-to-be-enforced-across-state

ಬೆಂಗಳೂರು: ರಾಜ್ಯದಲ್ಲಿ ಇಂದು ಸಂಜೆಯಿಂದಲೇ ಕಂಪ್ಲೀಟ್ ಲಾಕ್ ಡೌನ್ ಜಾರಿಯಾಗಲಿದೆ. ಕೊರೊನಾ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ವೀಕೆಂಡ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಮೊರೆ ಹೋಗಿದೆ. ಇದರಿಂದಾಗಿ ಸೋಮವಾರದ ವರೆಗೆ ಸಂಪೂರ್ಣ ರಾಜ್ಯ ಬಂದ್ ಆಗಲಿದೆ.

ಇಂದು ಸಂಜೆಯಿಂದಲೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುವುದರಿಂದ ಅಗತ್ಯ ಸಾಮಗ್ರಿಗಳ ಖರೀದಿ ಹೊರತುಪಡಿಸಿ, ಸುಮ್ಮನೆ ಮನೆಯಿಂದ ಹೊರಗೆ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಸಕಲ ರೀತಿಯಿಂದಲೂ ತಯಾರಿ ನಡೆಸಿಕೊಂಡಿದೆ.

ಲಾಕ್ ಡೌನ್ ವೇಳೆಯಲ್ಲಿ ಏನೇನು ಸಿಗಲಿದೆ ?

ಲಾಕ್ ಡೌನ್ ವೇಳೆಯಲ್ಲಿ ಅಗತ್ಯ ಸಾಮಗ್ರಿಗಳು ಮಾತ್ರ ಲಭ್ಯವಿರುತ್ತವೆ. ಆದರೆ ಅವುಗಳನ್ನು ಕೊಳ್ಳಲು ಬರುವ ಮುನ್ನ ಎಚ್ಚರ..! ಮಾಸ್ಕ್ ಕಡ್ಡಾಯವಾಗಿ ದರಿಸಲೇ ಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

  • ಹಾಲು, ಮೊಸರು, ಹಣ್ಣು, ತರಕಾರಿ, ಪೇಪರ್ ಎಂದಿನಂತೆಯೇ ಸಿಗಲಿದೆ.
  • ಔಷಧಗಳು, ವೈಧ್ಯಕೀಯ ಸೇವೆಗಳು, ಅಂಬುಲೆನ್ಸ್ ಸಿಗಲಿವೆ.
  • ಆಸ್ಪತ್ರೆಗಳು, ತುರ್ತು ಸೇವೆಗಳು, ದಿನಸಿಗಳು ಸಿಗಲಿವೆ.

ಲಾಕ್ ಡೌನ್ ವೇಳೆಯಲ್ಲಿ ಏನೇನು ಸಿಗಲ್ಲ ?

  • ವಾಕಿಂಗ್, ಪಾರ್ಕ್ ಗಳು ಸಂಪೂರ್ಣ ಬಂದ್ ಆಗಲಿವೆ.
  • ಸರಕಾರಿ ಬಸ್ಸುಗಳು, ಟ್ಯಾಕ್ಸಿ ಸೌಲಭ್ಯಗಳು ಸಿಗುವುದಿಲ್ಲ.
  • ಅಂಗಡಿ ಮುಂಗಟ್ಟುಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು ತೆರೆದಿರುವುದಿಲ್ಲ.
  • ಹೋಟೆಲ್, ರೆಸ್ಟೋರೆಂಟ್, ಪಬ್ ಗಳು ತೆರೆದಿರುವುದಿಲ್ಲ.
  • ಬೀದಿಬದಿಯ ವ್ಯಾಪಾರ, ಕೃಷಿ ಮಾರುಕಟ್ಟೆಗಳು, ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಿಗೆ ಅವಕಾಶವಿಲ್ಲ.

ಅಗತ್ಯ ವಸ್ತುಗಳ ಕರೀದಿಗೆ ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಹೊರಬರುವುದು ಕಡ್ಡಾಯವಾಗಿದೆ. ಸೋಂಕು ತಡೆಗೆ ಲಾಕ್ ಡೌನ್ ಅಗತ್ಯವಾಗಿದ್ದು, ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿಯುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿರಿ: ಹಾರ್ದಿಕ್ ಪಾಂಡ್ಯ ನೀಡಿದ ಚಾಲೆಂಜ್ ಗೆ ಕೊಹ್ಲಿ ಏನು ಮಾಡಿದ್ದಾರೆ ಗೊತ್ತಾ ?

LEAVE A REPLY

Please enter your comment!
Please enter your name here