sumalatha-ambareesh-lashes-out-against-hd-kumaraswamy-alleging-cheap-talk

ಬೆಂಗಳೂರು: ಮಂಡ್ಯ ಸಂಸದೆ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮತ್ತೆ ತಾರಕಕ್ಕೇರಿದೆ. ಸದ್ಯ ಕೆ ಆರ್ ಎಸ್ ಡ್ಯಾಮ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಕ್ಸಮರ ನಡೆಯುತ್ತಿದೆ.

ಕೆ ಆರ್ ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಹೇಳಿಕೊಂಡು ತಿರುಗುತ್ತಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕೆ ಆರ್ ಎಸ್ ಡ್ಯಾಮ್ ಇವರೇ ರಕ್ಷಣೆ ಮಾಡುತ್ತಾರಂತೆ, ಬಹುಷಃ ಇವರನ್ನೇ ಡ್ಯಾಮ್ ಬಾಗಿಲಿಗೆ ಮಲಗಿಸಿ ಬಿಟ್ಟರೆ ಬಿಗಿಯಾಗಿ ಬಿಡುತ್ತೆ. ಕೇವಲ ಯಾರದ್ದೋ ವಯಕ್ತಿಕ ದ್ವೇಷಕ್ಕೆ ಹೇಳಿಕೆ ನೀಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಷ್, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಮಹಿಳೆಯರ ಬಗ್ಗೆ ಹೀಗೆ ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಕಳೆದ ಚುನಾವಣೆಯಲ್ಲಿ ಆದ ಅನುಭವದ ಪಾಠವನ್ನು ಇವರು ಇನ್ನೂ ಕಲಿತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: 2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್​ಗೆ ತಿಳಿಸಿದ ಸರ್ಕಾರ

ಮಂಡ್ಯ ಜಿಲ್ಲೆಗೆ ಇವರಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಅನುಕಂಪದ ಮೇಲೆ ಸಂಸದೆಯಾಗಿ ಆಯ್ಕೆಯಾದ ಇವರು ಜನರ ಋಣ ತೀರಿಸುವ ಕೆಲಸ ,ಮಾಡಬೇಕು, ಇಲ್ಲವಾದರೆ ಜನರೇ ಸರಿಯಾಗಿ ಬುದ್ದಿಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿಯಲ್ಲಿ, ಕೆ ಆರ್ ಎಸ್ ಸುತ್ತಮುತ್ತ ಗಣಿಗಾರಿಕೆಗಳು ನಡೆಯುತ್ತಿರುವ ವಿಚಾರವನ್ನು ಅಲ್ಲಿನ ರೈತರೇ ಬಂದು ನನ್ನ ಬಳಿಯಲ್ಲಿ ಹೇಳಿದ್ದಾರೆ. ಈ ವಿಚಾರವನ್ನೇ ನಾನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೇನೆ. ಕುಮಾರಸ್ವಾಮಿಯವರ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಹಾಟ್ ಫೋಟೋ ಶೇರ್ ಮಾಡಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ನಟಿ ಲಕ್ಷ್ಮಿ ರೈ

LEAVE A REPLY

Please enter your comment!
Please enter your name here