sudeep-daughter-saanvi-angry-on-people-who-are-insulting-puneeth-rajkumar

ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ರಾಜ್ಯ ದುಃಖ ತಪ್ತವಾಗಿದೆ. ಅವರ ಅಗಲಿಕೆಯ ನೋವು ಜನಮಾನಸದಲ್ಲಿ ಇನ್ನೂ ಹಚ್ಚ ಹಸುರಾಗಿದೆ. ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗದಿಂದ ಸುಮಾರು 30 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿಗೆ ಹರಿದುಬಂದು ದರ್ಶನ ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಿರಲಿ ಎನ್ನುವ ಕಾರಣಕ್ಕೋಸ್ಕರ ರಾಜ್ಯಸರ್ಕಾರ ಮದ್ಯ ಮಾರಾಟವನ್ನು ನಿಷೇಧಿಸಿದೆ.

ಕುಡಿತದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್​ ಹಾಕಲಾಗಿತ್ತು. ಆದರೆ ಈ ಆದೇಶದಿಂದಾಗಿ ಮದ್ಯ ದೊರೆಯದೆ ಕೆಲವು ಅರೆ ಮನಸ್ಸಿನ ಜನರಿಗೆ ಕಿರಿ ಕಿರಿ ಉಂಟಾಗಿದೆ. ಅದರಲ್ಲೂ ಉತ್ತರ ಭಾರತದಿಂದ ಬೆಂಗಳೂರಿಗೆ ವಲಸೆ ಬಂದ ಉದ್ಯೋಗಿಗಳು ಎಣ್ಣೆ ಸಿಗದಿದ್ದಕ್ಕೆ ಕೀಳು ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ.

ನಿಷೇಧದ ನಡುವೆಯೂ ಲಿಕ್ಕರ್​ ಕೊಂಡುಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಬಳಿಕ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ, ಅಶ್ಲೀಲ ಪದಗಳಿಂದ ಪುನೀತ್​ ರಾಜ್​ಕುಮಾರ್​ ಅವರನ್ನು ಅವಮಾನಿಸಿದ್ದಾರೆ. ಈ ಕುರಿತು ಗರಂ ಆಗಿರುವ ಸುದೀಪ್​ ಪುತ್ರಿ ಸಾನ್ವಿ ಅವರು, “ಕರ್ನಾಟಕ ಸರ್ಕಾರ ಸರಿಯಾದ ಕ್ರಮವನ್ನೇ ಕೈಗೊಂಡಿದೆ. ಇಂಥ ಸಮಯದಲ್ಲಿ ಮದ್ಯ ಮಾರಾಟ ಒಳ್ಳೆಯದಲ್ಲ. ಸ್ವಲ್ಪವಾದರೂ ಪ್ರಜ್ಞಾವಂತಿಕೆ ತೋರಿಸಿ. ಅಗೌರವ ತೋರುವಂತಹ ಮಾತುಗಳನ್ನು ಆಡಬೇಡಿ’ ಎಂದು ವ್ಯಕ್ತಿಯೊಬ್ಬರು ಮಾಡಿದ ಪೋಸ್ಟ್ ನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here