ಆಂಧ್ರದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದ ‘ವಂದೇ ಭಾರತ್ ರೈಲಿ’ನ ಮೇಲೆ ಕಲ್ಲು ತೂರಾಟ

stone-pelting-at-vande-bharat-train-in-andhra

ಆಂಧ್ರಪ್ರದೇಶ: ಭಾರತವು ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ವದೇಶಿ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತ ಬಂದಿದೆ. ಇದರಿಂದಾಗಿ ಹಲವು ಆವಿಷ್ಕಾರಗಳು ದೇಶದಲ್ಲಿ ಆಗುತ್ತಿದೆ. ಅಂತೆಯೇ ದೇಶೀಯವಾಗಿ ತಯಾರಾದ ಭಾರತೀಯ ರೈಲು ‘ವಂದೇ ಭರತ್ ರೈಲು’ (Vande Bharat train). ಈ ರೈಲು ಉದ್ಘಾಟನೆಯಾಗುತ್ತಿದ್ದಂತೆ ಒಂದಿಲ್ಲೊಂದು ಕಡೆಗಳಲ್ಲಿ ಕಲ್ಲು ತೂರುತ್ತಿರುವ ಸುದ್ದಿಗಳು ಆಗಾಗ ಕೇಳುತ್ತಾ ಇರುತ್ತೇವೆ. ಅದೇ ರೀತಿಯ ಘಟನೆಯು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇತ್ತೀಚಿಗೆ ನಡೆದಿದೆ.

ವಿಶಾಖಪಟ್ಟಣಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನವರಿ 19 ರಂದು ಉದ್ಘಾಟಿಸಲಿರುವ ವಂದೇ ಭಾರತ್ ರೈಲಿನ ಕೋಚ್ ಒಂದರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ರೈಲು ಟ್ರಯಲ್ ರನ್ನಿಂಗ್ ಪೂರ್ಣಗೊಳಿಸಿ ವಿಶಾಖಪಟ್ಟಣಂ ರೈಲು ನಿಲ್ದಾಣದಿಂದ ಮರಿಫಾಲೆಂ ನಿರ್ವಹಣಾ ಕೇಂದ್ರಕ್ಕೆ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿರಿ: ಜನವರಿ 16ರಂದು ಬೆಂಗಳೂರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಗಮನ

ಈ ಕುರಿತಂತೆ ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಈ ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಜನವರಿ 19 ರಂದು ಸಿಕಂದರಾಬಾದ್ ರೈಲು ನಿಲ್ದಾಣದಿಂದ ಫ್ಲ್ಯಾಗ್ ಆಫ್ ಮಾಡಲಿದ್ದಾರೆ.

ಇದನ್ನೂ ಓದಿರಿ: ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್: ಡಿಕೆಶಿ ಘೋಷಣೆ

LEAVE A REPLY

Please enter your comment!
Please enter your name here