stay-calm-dont-believe-rumours-on-coronavirus-says-pm-modi

ನವದೆಹಲಿ: ಕರೋನಾ ವೈರಸ್ ತನ್ನ ಕರಾಳ ರೂಪವನ್ನು ಇಡೀ ಪ್ರಪಂಚಕ್ಕೆ ತೋರಿಸುತ್ತಿದೆ. ಇದರಿಂದಾಗಿ ಜನತೆ ಭಯದಿಂದ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶದ ಪ್ರಧಾನಿ ಯಾವುದೇ ಭಯ ಬೇಡ ಬದಲಿಗೆ ಜಾಗ್ರತೆಯನ್ನು ವಹಿಸಿ ಎನ್ನುವ ಸಲಹೆಯನ್ನು ನೀಡಿದ್ದಾರೆ.

ಇಂದು ಜನೌಷಧಿ ಕೇಂದ್ರಗಳ ಮಾಲೀಕರು ಹಾಗೂ ಪ್ರಧಾನಮಂತ್ರಿ ಜನೌಷಧಿ ಪರಿಯೋಜನೆಯ ಫಲಾನುಭವಿಗಳ ಜೊತೆ ಸಂವಾದದಲ್ಲಿ ಮಾತನಾಡುತ್ತಾ ದೇಶದ ಜನತೆ ಕರೋನಾ ವೈರಸ್ ಬಗ್ಗೆ ಭಯಗೊಳ್ಳುವುದು ಬೇಡ, ಬದಲಿಗೆ ಸರಿಯಾದ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ. ಹಲವರು ಅದು ತಿನ್ನಬೇಡಿ, ಇದು ತಿನ್ನಬೇಡಿ ಎಂಬ ಸಲಹೆಗಳನ್ನು ನೀಡುತ್ತಾರೆ. ಮತ್ತೆ ಕೆಲವರು ಇದನ್ನು ತಿನ್ನಿ ವೈರಸ್ ಬರುವುದಿಲ್ಲಾ ಎನ್ನುವ ಸಲಹೆಗಳನ್ನು ನೀಡುತ್ತಾರೆ, ನೀವು ಇವುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ವೈರಸ್ ಕುರಿತಾಗಿ ನಿಮಗೆ ಏನಾದರು ಸಂದೇಹಗಳು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅಲ್ಲದೇ ವಯಕ್ತಿಕ ಸ್ವಚ್ಛತೆಗ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದು ಅಗತ್ಯವಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಅವಶ್ಯವಾಗಿ ಮಾಸ್ಕ್ ಗಳನ್ನು ಬಳಸಿ ಎಂದು ಸಲಹೆಯನ್ನು ನೀಡಿದರು.

ಕರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಇಡೀ ಜಗತ್ತು ಹಸ್ತಲಾಘವಾದ ಬದಲಾಗಿ “ನಮಸ್ಕಾರ”ಮಾಡುವ ಮೂಲಕ ಶುಭಾಶಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನಾವು ಯಾವುದೋ ಕಾರಣಗಳಿಂದ ಮರೆತಿದ್ದರೆ ಪುನಃ ನಾವು ರೂಡಿಕೊಳ್ಳೋಣ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here