ಗೃಹಿಣಿಯರ ನೆಚ್ಚಿನ ಧಾರಾವಾಹಿಗಳು ಕೊವಿಡ್-19 ನಿಂದಾಗಿ ಚಿತ್ರೀಕರಣ ನಡೆಸಲು ತೊಂದರೆ ಅನುಭವಿಸುತ್ತಿದ್ದು, ಸಧ್ಯ ಸರಕಾರದಿಂದ ಮನೆಯ ಒಳಗೆ ಷರತ್ತುಗಳನ್ನು ಪಾಲಿಸಿಕೊಂಡು ಚಿತ್ರೀಕರಣ ನಡೆಸಲು ಪರವಾನಿಗೆ ದೊರೆತಿದೆ. ಹತ್ತರಿಂದ ಹನ್ನೆರಡು ಜನರ ತಂಡ ಮನೆಯೊಳಗೇ ಷರತ್ತುಗಳನ್ನು ಪಾಲಿಸಿಕೊಂಡು ಚಿತ್ರಿಕರೀಸಿ ಎಂದು ರಾಜ್ಯಸರಕಾರ ಹೇಳಿದೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಕಿರುತೆರೆ ಚಿತ್ರ ನಿರ್ಮಾಣ ಮತ್ತು ಟಿವಿ ಸೀರಿಯಲ್ ಕಲಾವಿದರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ನನ್ನ ಜೊತೆಯಲ್ಲಿ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಕೇವಲ ಮನೆಯೊಳಗೇ ಕೊರೊನಾ ಮುಂಜಾಗ್ರತೆಗಳನ್ನು ಅನಿಸರಿಸಿ ಚಿತ್ರೀಕರಣ ನಡೆಸಲು ಅನುಮತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿರಿ: ಈ ಲಾಕ್ ಡೌನ್ ಸಮಯದಲ್ಲಿ ನಾದಬ್ರಹ್ಮ ಹಂಸಲೇಖ ರಸ್ತೆಗಿಳಿದು ಏನುಮಾಡಿದ್ದಾರೆ ಗೊತ್ತೇ ?
ಸಧ್ಯ ಟಿವಿ ಸೀರಿಯಲ್ ಗಳ ಚಿತ್ರೀಕರಣಕ್ಕೆ ಅನುಮತಿಯನ್ನು ನೀಡಲಾಗಿದ್ದು, ಹತ್ತರಿಂದ ಹನ್ನೆರಡು ಜನರು ಮಾತ್ರ ಚಿತ್ರೀಕರಣದಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಸಿರಿಯಲ್ ಗಳನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರಿಕರಿಸಲಾಗುತ್ತಿತ್ತು, ಆದರೆ ಈಗ ಈ ರೀತಿಯ ಚಿತ್ರೀಕರಣಕ್ಕೆ ಯಾವುದೇ ರೀತಿಯಲ್ಲಿ ಸರಕಾರ ಒಪ್ಪಿಗೆ ನೀಡಿಲ್ಲ. ಈ ನಡುವೆ ರೀಯಾಲಿಟಿ ಶೋಗಳು ಮತ್ತು ಸಿನಿಮಾ ಚಿತ್ರೀಕರಣ ನಡೆಸುವಾಗ ಹೆಚ್ಚಿನ ಜನರು ಸೇರುವುದರಿಂದ ಅಪಾಯವನ್ನು ಅರಿತು ಅವುಗಳಿಗೆ ಯಾವುದೇ ರೀತಿಯಲ್ಲಿ ಒಪ್ಪಿಗೆ ದೊರೆತಿಲ್ಲ.
ಕೊರೊನಾ ಸಂಬಂಧ ಲಾಕ್ ಡೌನ್ ಹೇರಲಾಗಿದ್ದು, ಸುಮಾರು 6000 ಸಾವಿರ ಕಿರುತೆರೆಯ ಕಾರ್ಮಿಕರ ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಲಾಕ್ ಡೌನ್ ನಿಂದ ಸುಮಾರು 100 ಕ್ಕೂ ಹೆಚ್ಚು ಸೀರಿಯಲ್ ಗಳ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈಗ ಸಣ್ಣ ಪ್ರಮಾಣದ ಸಡಿಲಿಕೆ ದೊರೆತಿದ್ದು, ಸೀರಿಯಲ್ ಕಥೆಗಳಲ್ಲಿ ಸಣ್ಣ ಪ್ರಮಾಣದ ಬದಲಾವಣೆಗಳನ್ನು ಮಾಡಿಕೊಂಡು ಮನೆಯಲ್ಲಿಯೇ ಚಿತ್ರೀಕರಣ ನಡೆಸಲು ಕಿರುತೆರೆ ಬಳಗ ಇನ್ನುಮುಂದೆ ಮುಂದಾಗಲಿದೆ.
ಇದನ್ನೂ ಓದಿರಿ: ಯಶ್, ರಾಧಿಕಾ ಮಗನ ಪೋಟೋ ರಿವಿಲ್..! ಹೇಗಿದ್ದಾನೆ ಗೊತ್ತೇ ಜೂನಿಯರ್ ಯಶ್ ?