ಬೆಂಗಳೂರು: ಕೊರೊನಾ ಸೋಂಕು ಈ ಬಾರಿಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ನೀಡುತ್ತಿಲ್ಲ. ಸೋಂಕು ಹರಡುವ ಬೀತಿಯಲ್ಲಿ ಜನರು ಮತ್ತು ಸರಕಾರ ಇದ್ದು, ಈ ಬಾರಿಯ ಗಣೇಶೋತ್ಸವ ಆಚರಿಸುವುದು ಹೇಗೆ ಎಂಬ ಪ್ರಶ್ನೆ ಕಾಡಿದೆ. ಈ ಕುರಿತಂತೆ ಸರಕಾರ ಒಂದಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪ್ರತಿಭಾರೀಯೂ ದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಅತೀ ವಿಜೃಂಭಣೆಯಿಂದ ನಡೆಯುತ್ತಿತ್ತು. ಸೋಂಕಿನ ಕರಿನೆರಳು ಈ ಬಾರಿಯ ಹಬ್ಬಗಳನ್ನು ನುಂಗಿಹಾಕಿರುವುದು ಸುಳ್ಳಲ್ಲ. ಸರಕಾರ ಹೊರಡಿಸಿರುವ ಕೆಲವು ಮಾರ್ಗಸೂಚಿಗಳ ಪರಿಣಾಮವಾಗಿ ಈ ಬಾರಿ ವಿಜೃಂಭಣೆಯ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿದೆ.
ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದ ರಾಜ್ಯ ಸರಕಾರದ ಮಾರ್ಗಸೂಚಿಗಳು
- ಗಣೇಶ ಚತುರ್ಥಿಯನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನ ಅಥವಾ ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸುವುದು.
- ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕ ಸ್ಥಳ (ರಸ್ತೆ , ಗಲ್ಲಿ, ಓಣಿ,ಮೈದಾನ,ಇತ್ಯಾದಿ)ಗಳಲ್ಲಿ ಗಣಪತಿಯನ್ನು ಸ್ಥಾಪಿಸಬಾರದು.
- ಯಾವುದೇ ಕಾರಣಕ್ಕೂ ವಿಗ್ರಹಗಳನ್ನು ಕೆರೆ, ನದಿ, ಕೊಳ, ಬಾವಿ, ಕಲ್ಯಾಣಿ ಇತ್ಯಾದಿಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ.
- ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡುವುದನ್ನು ನಿರ್ಬಂಧಿಸಿದೆ.
- ಮನೆಯಲ್ಲೇ ಪ್ರತಿಷ್ಠಾಪಿಸಿದ ಗಣಪತಿಯನ್ನು ತಮ್ಮ ಮನೆಯ ಆವರಣದಲ್ಲೇ ವಿಸರ್ಜಿಸಬೇಕು.
- ದೇವಸ್ಥಾನಕ್ಕೆ ಗಣಪತಿ ನೋಡಲು ಬರುವ ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ ಹಾಗೂ ಮಾಸ್ಕ ಕಡ್ಡಾಯವಾಗಿದೇ ಹಾಗೂ ದಿನಾಲೂ ದೇವಸ್ಥಾನವನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೇ.
- ಗಣೇಶೋತ್ಸವ ಆಚರಣೆಯ ಸಮಯದಲ್ಲಿ ಸಂದರ್ಭಕ್ಕನುಸಾರ ಸರಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ/ ಪ್ರಾಧಿಕಾರಗಳ ಆದೇಶ / ನಿರ್ಧೇಶನ ಪಾಲಿಸುವುದು ಕಡ್ಡಾಯವಾಗಿದೆ.
- ರಾಷ್ಟ್ರೀಯ ನಿರ್ಧೆಶನಗಳನ್ನು ಮತ್ತು ರಾಜ್ಯಸರಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ 188 ಅಡಿಯಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು.
ಇದನ್ನೂ ಓದಿರಿ: ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಯಡಿಯೂರಪ್ಪ ಮಾತು