sslc-revission-class-starts-from-today-at-doordharshan-chandana-vahini

ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುಮುಖ್ಯವಾದ ಹತ್ತನೇಯ ತರಗತಿಯ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಸರಕಾರ ಹಲವು ದಿನಗಳ ಹಿಂದೆಯೇ ಆದೇಶವನ್ನು ಹೊರಡಿಸಿತ್ತು. ಈ ಆದೇಶದ ಬಳಿಕ ವಿದ್ಯಾರ್ಥಿಗಳಲ್ಲಿ ತಮ್ಮ ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆ ಕಾಡತೊಡಗಿದ್ದಂತು ಸುಳ್ಳಲ್ಲ. ಈ ನಡುವೆ ಶಿಕ್ಷಣ ಸಚಿವರು ಹೇಳಿಕೆ ನೀಡಿ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲಾ, ಪರಿಸ್ಥಿತಿ ತಿಳಿಯಾದ ನಂತರ ಪರೀಕ್ಷೆಗಳನ್ನು ನಡೆಸುತ್ತೇವೆ. ಪರೀಕ್ಷೆಗೂ ಮುನ್ನ ಪುನರ್ ಮನನ ತರಗತಿಗಳನ್ನು ನಡೆಸಲಾಗುತ್ತದೆ. ಮಕ್ಕಳು ಭಯಪಡುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿದ್ದರು.

ಇದನ್ನೂ ಓದಿರಿ: ಕೆಮ್ಮು, ಜ್ವರ ಅಷ್ಟೇ ಅಲ್ಲ ಈ ಲಕ್ಷಣಗಳು ಕೂಡಾ ಕೊವಿಡ್-19 ಪರಿಣಾಮವಾಗಿರಬಹುದು

ಈಗಲೂ ಪರಿಸ್ಥಿತಿ ಎಲ್ಲ ರೀತಿಯಿಂದ ತಿಳಿಯಾಗದೆ ಪುನರ್ ಮನನ ತರಗತಿಗಳನ್ನು ನಡೆಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಚಂದನ ವಾಹಿನಿಯ ಮೂಲಕ ಈ ಕಾರ್ಯ ಪ್ರಾರಂಭಿಸಿದ್ದಾರೆ. ಇಂದಿನಿಂದ ಪ್ರತಿದಿನ ನುರಿತ ಶಿಕ್ಷಕರಿಂದ ವಿಷಯವಾರು ಪುನರ್ ಮನನ ತರಗತಿಗಳು ಪ್ರಸಾರವಾಗಲಿದ್ದು, ಮಧ್ಯಾಹ್ನ 3 ಗಂಟೆಯಿಂದ 4.30 ರ ವರೆಗೆ ಎಂದು ಸಮಯ ನಿಗದಿ ಮಾಡಲಾಗಿದೆ. ಈ ಬೋಧನಾ ತರಗತಿಯ ಕೊನೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅವುಗಳಿಗೆ ಹೇಗೆ ಉತ್ತರಿಸಬೇಕು ಎನ್ನುವುದನ್ನು ತಿಳಿಸಿಕೊಡಲಾಗುವುದು ಎಂದು ಸಚಿವ ಸುರೇಶ ಕುಮಾರ್ ಅವರು ತಿಳಿಸಿದ್ದಾರೆ. 

 

LEAVE A REPLY

Please enter your comment!
Please enter your name here