SSLC Topper list

ಬೆಂಗಳೂರು : 2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಶೇಕಡಾ 71.80 ರಷ್ಟು ಫಲಿತಾಂಶ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ 6 ಮಂದಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿ ಕೊರೊನಾ ಸಂಕಷ್ಟದ ನಡುವೆ ಪರೀಕ್ಷೆಗಳು ನಡೆದಿದ್ದು, ಲಾಕ್ ಡೌನ್ ಸಮಯದಲ್ಲಿ ಓದಲು ಬೇಕಾದಷ್ಟು ಅವಕಾಶಗಳು ಇದ್ದವು. ಇದನ್ನು ಸದುಪಯೋಗ ಪಡಿಸಿಕೊಂಡ ಹಲವರು ಅತ್ಯುತ್ತಮ ಅಂಕವನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿರಿ: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣ, ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ

ಸನ್ನಿಧಿ ಮಹಾಬಲೇಶ್ವರ ಹೆಗಡೆ 
ಸರಕಾರಿ ಮಾರಿಕಾಂಬಾ ಪ್ರೌಢ ಶಾಲೆ ಶಿರಸಿ
ಡಾ. ಮಹಾಬಲೇಶ್ವರ ಹೆಗಡೆ ಮತ್ತು ವೀಣಾ ಹೆಗಡೆಯವರ ಮಗಳು. ಸರಕಾರಿ ಶಾಲೆಯಲ್ಲಿ ಓದಿ, ಯಾವುದೇ ಕೋಚಿಂಗ್ ಪಡೆಯದೇ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಎಂ. ಪಿ. ಧೀರಜ್ ರೆಡ್ಡಿ 
ಶ್ರೀ ಸತ್ಯಸಾಯಿ ಸರಸ್ವತಿ ಹೈಸ್ಕೂಲ್ ಮಾರದೆವನಹಳ್ಳಿ, ಮಂಡ್ಯ.
ಎಂ. ಪ್ರಭಾಕರ್ ರೆಡ್ಡಿ ಮತ್ತು ಕೆ.ಸಿ. ಮಂಜುಳಾ ಅವರ ಪುತ್ರ. ಲಾಕ್ ಡೌನ್ ಸಮಯವನ್ನು ವರವಾಗಿ ಬಳಸಿಕೊಂಡು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾನೆ. ಈತನಿಗೆ ಮುಂದೆ ಐಎಎಸ್ ಪಾಸ್ ಮಾಡುವ ಹಂಬಲವಿದೆ.

ಅನುಷ್ ಎ. ಎಲ್.
ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಸುಳ್ಯ, ದಕ್ಷಿಣ ಕನ್ನಡ.
ಮೆಸ್ಕಾ ಸಿಬ್ಬಂದಿಯಾಗಿರುವ ಲೋಕೇಶ್ ಹಾಗೂ ಉಷಾ ದಂಪತಿಗಳ ಮಗ. ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದು, ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕವನ್ನು ಪಡೆದು ಟಾಪರ್ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿದ್ದಾನೆ.

ಚಿರಾಯು ಕೆ. ಎಸ್. 
ಸೆಂಟ್ ಮೇರಿಸ್ ಸ್ಕೂಲ್ ನಾಗಸಂದ್ರ, ಬೆಂಗಳೂರು.
ಲಾಕ್ ಡೌನ್ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು 625 ಅಂಕವನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ನಿಖಿಲೇಶ್ ಎಂ. ಮರಳಿ
ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ ಸದಾಶಿವನಗರ, ಬೆಂಗಳೂರು.
ನಾಗೇಶ್ ಮರಳಿ ಮತ್ತು ಹರಿಣಾಕ್ಷಿ ಇವರ ಪುತ್ರ. ಲಾಕ್ ಡೌನ್ ಸಮಯವನ್ನು ಸರಿಯಾಗಿ ಬಳಸಿಕೊಂಡು, ಪ್ರಯತ್ನ ಬಿಡದೆ 625 ಅಂಕವನ್ನು ಪಡೆದು ರಾಜ್ಯದ ಟಾಪರ್ ಲಿಸ್ಟ್ ನಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ.

ಐ. ಪಿ. ತನ್ಮಯಿ
ಸೆಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲ್  ಚಿಕ್ಕಮಂಗಳೂರು
ಇ. ಎಸ್. ಪ್ರಸನ್ನ ವಸ್ತಾರೆ ಮತ್ತು ಸಂಧ್ಯಾ ಡಿ. ಎಲ್. ಇವರ ಪುತ್ರಿ. ಲಾಕ್ ಡೌನ್ ಸಮಯದಲ್ಲಿ ದಿನಕ್ಕೆರಡು ಗಂಟೆಗಳ ಕಾಲ ಓದಿ, ಪರೀಕ್ಷಾ ದಿನಾಂಕ ನಿಗದಿಯಾದಂತೆ ಮೊದಲಿನಿಂದ ಎಲ್ಲವನ್ನು ಪುನರ್ ಮನನ ಮಾಡಿಕೊಂಡು ಉತ್ತಮವಾಗಿ ಪರೀಕ್ಷೆಯನ್ನು ಬರೆದಿದ್ದಾರೆ.

LEAVE A REPLY

Please enter your comment!
Please enter your name here